ADVERTISEMENT

ಆಸ್ಪತ್ರೆ ಸ್ಥಳಾಂತರ ಬೇಡ: ಗ್ರಾಮಸ್ಥರ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 8:45 IST
Last Updated 13 ಅಕ್ಟೋಬರ್ 2017, 8:45 IST

ಕಿಕ್ಕೇರಿ: ಹಳ್ಳಿಗಾಡಿನ ಜನರಿಗೆ ಅನುಕೂಲವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸುವುದು ಬೇಡ ಎಂದು ಗ್ರಾಮಸ್ಧರು ಆಕ್ರೋಶ ವ್ಯಕ್ತಪಡಿಸಿದರು. ಸಮೀಪದ ಕುಂದೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೈಲನಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಿರುವ ಈ ಆಸ್ಪತ್ರೆಯನ್ನು ಸ್ಥಳಾಂತರಿಸಲು ಬಿಡುವುದಿಲ್ಲ. ಬೆಡದಹಳ್ಳಿ, ಶಟ್ಟಹಳ್ಳಿ, ಜಕ್ಕನಹಳ್ಳಿ, ಮಗನಹೊಸಹಳ್ಳಿ, ಭಾರತೀಪುರ ಗ್ರಾಮಕ್ಕೆ ಬಹಳ ಹತ್ತಿರವಾದ ಆಸ್ಪತ್ರೆ ಇದಾಗಿದ್ದು, ಬೇಕಾದಷ್ಟು ಜಾಗ ಕೊಡುತ್ತೇವೆ ಎಂದು ಪಟ್ಟು ಹಿಡಿದರು.

ತಾಲೂಕು ಆರೋಗ್ಯಾಧಿಕಾರಿ ಅರವಿಂದ್ ಪತ್ರಿಕೆಯೊಂದಿಗೆ ಮಾತನಾಡಿ, ‘ಆರೋಗ್ಯ ಕೇಂದ್ರ ಮೈಲನಹಳ್ಳಿ ಗ್ರಾಮಕ್ಕೆ ಸ್ಥಳಾಂತರವಾಗಿದೆ. ಗ್ರಾಮಸ್ಥರ ಮನವಿಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ವಹಿಸಲು ಕೋರಲಾಗುವುದು’ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ, ಮುಖಂಡರಾದ ಮಂಜೇಗೌಡ, ಮಧು, ರಾಜಪ್ಪ, ಶೇಖರ್, ಮೊಗಣ್ಣಗೌಡ, ಕಾಳಣ್ಣ, ಮೊಟ್ಟೆ ಮಂಜು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.