ADVERTISEMENT

ಕನ್ನಂಬಾಡಿ ಕಟ್ಟದಿದ್ದರೆ ಮಂಡ್ಯ ಜಿಲ್ಲೆ ಬೆಂಗಾಡು

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 7:50 IST
Last Updated 22 ಜೂನ್ 2012, 7:50 IST

ಮದ್ದೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂದು ಕನ್ನಂಬಾಡಿ ಕಟ್ಟದಿದ್ದರೆ ಮಂಡ್ಯ ಜಿಲ್ಲೆ ಬರದ ಬೆಂಗಾಡಾಗುತ್ತಿತ್ತು ಎಂದು ನಾಟಕ ಲೇಖಕ ಸೀಬನಹಳ್ಳಿಸ್ವಾಮಿ ತಿಳಿಸಿದರು.

ಪಟ್ಟಣದ ವಿಜಯ ವಿದ್ಯಾಸಂಸ್ಥೆಯಲ್ಲಿ ಗುರುವಾರ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕ್ರೀಡಾ ಸಂಘ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನೆ ಮನೆ ದೀಪ ಕೃಷ್ಣರಾಜ ಭೂಪ ಎಂಬ ಕೀರ್ತಿಯನ್ನು ಪಡೆದ ನಾಲ್ವಡಿ ಅವರು ಇಡೀ ನಾಡಿನ ಅಭಿವೃದ್ಧಿಗೆ ತಮ್ಮನ್ನು ತಾವು ಅರ್ಪಿಸಿಕೊಂಡರು. ಅವರ ತ್ಯಾಗ ಆದರ್ಶಗಳ ಅನುಸರಣೆಯೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ನುಡಿದರು.

ಭಾರತ ವಿಕಾಸ್ ಪರಿಷತ್ ಅಧ್ಯಕ್ಷ ವಿ.ಹರ್ಷ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬದುಕು ಸಾಧನೆ ಕುರಿತು ಸಾಕ್ಷ್ಯಚಿತ್ರದ ಸಿಡಿಯನ್ನು ವಿತರಿಸಿದರು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ಸಾಕ್ಷ್ಯಚಿತ್ರದ ಪ್ರತಿಗಳನ್ನು ಉಚಿತವಾಗಿ ನೀಡುವುದಾಗಿ ಸಂಘದ ಅಧ್ಯಕ್ಷ ಲಾರಾ ಪ್ರಸನ್ನ ತಿಳಿಸಿದರು.

ವಿಶ್ವ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್‌ಕುಮಾರ್, ಅಂಬರಹಳ್ಳಿಸ್ವಾಮಿ, ಎಂ.ಸಿ.ಲಿಂಗರಾಜು, ಗುಡಿಗೆರೆ ಬಸವರಾಜು, ಮುಖ್ಯಶಿಕ್ಷಕ ರವಿ, ಶಿಕ್ಷಕರಾದ ಸಿದ್ದರಾಜು, ಗೀತಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪರಿಚಯ ಕಾರ್ಯಕ್ರಮ ಇಂದು
ಮೈಸೂರು: ಜೆ.ಪಿ.ನಗರದ ಪ್ರಣವ ಯೋಗ ಮಂದಿರ ಟ್ರಸ್ಟ್‌ನಲ್ಲಿ ಜೂ. 22 ರಂದು ಸಂಜೆ 7 ರಿಂದ 8 ರವರೆಗೆ ಪೆಂಡುಲಮ್‌ನ ವಿಸ್ಮಯ ಶಕ್ತಿಗಳ ಬಗ್ಗೆ ಒಂದು ದಿನದ ಉಚಿತ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.