ADVERTISEMENT

ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 10:15 IST
Last Updated 15 ಅಕ್ಟೋಬರ್ 2011, 10:15 IST

ಕೃಷ್ಣರಾಜಪೇಟೆ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ಸಹವರ್ತಿಯಾದ ವಕೀಲ ಪ್ರಶಾಂತ್ ಭೂಷಣ್ ಮೇಲೆ ದುಷ್ಕರ್ಮಿಗಳು ದೆಹಲಿಯಲ್ಲಿ ನಡೆಸಿರುವ ಹಲ್ಲೆ ಖಂಡಿಸಿ ತಾಲ್ಲೂಕಿನ ವಕೀಲರು ಶುಕ್ರವಾರ ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ತಾಲ್ಲೂಕು ವಕೀಲರ ಸಂಘದ ವತಿಯಿಂದ ನ್ಯಾಯವಾದಿಗಳ ಸಭೆ ನಡೆಸಲಾಯಿತು. ಅಮಾನುಷವಾಗಿ ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ಮಾಡಿರುವ ಶ್ರೀರಾಮ ಸೇನೆಯ ಯುವಕರ ಕ್ರಮವನ್ನು ಖಂಡಿಸುವ ನಿರ್ಣಯವನ್ನು ತೆಗೆದುಕೊಳ್ಳ ಲಾಯಿತು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದು ಕೊಳ್ಳಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಿದ್ದಾರೆ.

ನಂತರ ಮಿನಿವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಅವರನ್ನು ಭೇಟಿ ಮಾಡಿದ ವಕೀಲರು ಮನವಿ ಪತ್ರವನ್ನು ಅರ್ಪಿಸಿದರು. ವಕೀಲರ ಸಂಘದ ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ವಿ.ಎಸ್.ಧನಂಜಯ, ಉಪಾಧ್ಯಕ್ಷ ಕೆ.ಆರ್. ಮಹೇಶ್, ಹಿರಿಯ ವಕೀಲರಾದ ಜಿ.ಆರ್.ಅನಂತರಾಮಯ್ಯ, ರವಿ ಶಂಕರ್, ಬಿ.ಗಣೇಶ್, ಪುರ ಮಂಜುನಾಥ್, ಎಂ.ಎಲ್.ಸುರೇಶ್, ಎಂ.ಆರ್.ಪ್ರಸನ್ನಕುಮಾರ್ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.