ADVERTISEMENT

ಕೂಲಿ ನಿಗದಿ ಆಗ್ರಹಿಸಿ ಜಾಥಾ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 7:50 IST
Last Updated 8 ಅಕ್ಟೋಬರ್ 2012, 7:50 IST
ಕೂಲಿ ನಿಗದಿ ಆಗ್ರಹಿಸಿ ಜಾಥಾ
ಕೂಲಿ ನಿಗದಿ ಆಗ್ರಹಿಸಿ ಜಾಥಾ   

ಮಳವಳ್ಳಿ: ಕಾರ್ಮಿಕರಿಗೆ ರೂ.10 ಸಾವಿರ ನಿಗದಿಗಾಗಿ ಒತ್ತಾಯಿಸಿ ಸಿಐಟಿಯು ತಾಲ್ಲೂಕಿನ ಪ್ರಥಮ ಸಮಾವೇಶವನ್ನು ಪಟ್ಟಣದ ಶಾದಿಮಹಲ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ರಾಮಕೃಷ್ಣ ಚಾಲನೆ ನೀಡಿ ಮಾತನಾಡಿ, ತಾಲ್ಲೂಕಿನಲ್ಲಿ 25 ಸಾವಿರಕ್ಕಿಂತ ಹೆಚ್ಚು ಕಾರ್ಮಿಕರು ಕನಿಷ್ಟ ಕೂಲಿದೊರೆಯದೆ ಜೀವನ ನಡೆಸುತ್ತಿದ್ದು ಅದರಲ್ಲೂ ಅಂಗನವಾಡಿ, ಅಕ್ಷರದಾಸೋಹ, ಆಶಾಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಕನಿಷ್ಟ ವೇತನ ದೊರೆಯದೆ ಜೀವನ ನಡೆಸುವುದೆ ದುಸ್ತರವಾಗಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಸ್.ಲತಾ ಸಮಾವೇಶದಲ್ಲಿ ಧ್ವಜಾರೋಹಣ ಮಾಡಿದರು.
ಸಿಐಟಿಯು ಸಂಚಾಲಕಿ ಮಹದೇವಮ್ಮ, ಚಲುವರಾಜು, ಕವಿನಾಗರಾಜು, ಪುಟ್ಟಶೆಟ್ಟಿ, ಚನ್ನಾಜಮ್ಮ, ನಾಗಮ್ಮ, ಲಿಂಗರಾಜಮೂರ್ತಿ, ಆನಂದ್ ಇತರರು ಉಪಸ್ಥಿತರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.