ADVERTISEMENT

ಚಕ್ರಕ್ಕೆ ವೇಲ್ ಸಿಕ್ಕಿ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 6:05 IST
Last Updated 19 ಜುಲೈ 2012, 6:05 IST

ಮಂಡ್ಯ: ದ್ವಿಚಕ್ರ ವಾಹನದ ಚಕ್ರಕ್ಕೆ ವೇಲ್ ಸಿಕ್ಕ ಪರಿಣಾಮ ಆರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ತಾಲ್ಲೂಕಿನ ಗೋಪಾಲಪುರ ಬಳಿ ಬುಧವಾರ ನಡೆದಿದೆ.

ಬಿಳಿದೇಗುಲ ಗ್ರಾಮದ ಪ್ರಸನ್ನ ಎಂಬುವವರ ಪುತ್ರಿ ತೇಜಸ್ವಿನಿ ಮೃತಪಟ್ಟ ದುರ್ದೈವಿ. ವೇಲ್ ಬಿಗಿಯಾಗಿ ಬಿಗಿದುಕೊಂಡ ರಭಸಕ್ಕೆ ರುಂಡ-ಮುಂಡ ಬೇರೆಯಾಗಿದೆ.

ಪ್ರಸನ್ನ ಅವರು, ಮಗಳು ತೇಜಸ್ವಿನಿಯ ಕೊರಳಲ್ಲಿದ್ದ ವೇಲ್ ಗಾಳಿಗೆ ವಾಹನದ ಚಕ್ರಕ್ಕೆ ಸಿಲುಕಿದೆ. ಕೊರಳಿಗೆ ಸುತ್ತಿಕೊಂಡಿದ್ದ ವೇಲ್ ಬಿಗಿದುಕೊಂಡ ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್‌ಇನ್‌ಸ್ಪೆಕ್ಟರ್ ಬಾಲಕೃಷ್ಣ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.