ADVERTISEMENT

ನೀರು ಜೀವಜಲ: ನಾಗೇಶ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:44 IST
Last Updated 5 ಸೆಪ್ಟೆಂಬರ್ 2013, 8:44 IST

ಮಂಡ್ಯ: `ನೀರು' ಬರೀ ಎರಡಕ್ಷರದ ಪದವಲ್ಲ. ಅದು, ಜೀವಜಲ' ಎಂದು ಪರಿಸರ ಚಿಂತಕ ನಾಗೇಶ್ ಹೆಗಡೆ ಹೇಳಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಸೋಮವಾರ `ನೇಚರ್ ಅಂಡ್ ಅಡ್ವೆಂಚರ್ ಕ್ಲಬ್' ಉದ್ಘಾಟಿಸಿ ಅವರು ಮಾತನಾಡಿದರು.

ಅವೈಜ್ಞಾನಿಕ ನೀರಿನ ಬಳಕೆಯಿಂದಾಗಿಯೇ, ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಅಂತರ್ಜಲ ಬರಗಾಲ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮನುಷ್ಯ ತನ್ನ ದುರಾಸೆಗಾಗಿ ನಿಸರ್ಗ, ಭೂಮಿಯನ್ನು ಧ್ವಂಸ ಮಾಡುತ್ತಿದ್ದಾನೆ. ಸುಮಾರು 75 ಸಾವಿರ ಜೀವಿಗಳನ್ನು, ಹಲವಾರು ನೈಸರ್ಗಿಕ ಬೆಳೆಗಳನ್ನು ನಾಶ ಮಾಡಿದ್ದಾನೆ.

ತನಗೆ ಬೇಕಾದ ಹತ್ತದಿನೈದು ಬೆಳೆಗಳನ್ನು ಮಾತ್ರ ಉಳಿಸಿಕೊಂಡಿದ್ದಾನೆ. ಆಕಾಶ, ನೆಲ, ಜಲ, ಅಂತರ್ಜಲ ಸೇರಿದಂತೆ ಎಲ್ಲವನ್ನೂ ಮಲಿನ ಮಾಡಿದ್ದಾನೆ. ಇಡೀ ಭೂಮಿಯನ್ನು ಧ್ವಂಸ ಮಾಡಲು ಸ್ಫೋಟಕಗಳು, ಸಿಡಿತಲೆಗಳು, ಅಣ್ವಸ್ತ್ರಗಳನ್ನು ಸೃಷ್ಟಿ ಮಾಡಿಕೊಂಡು ನಿಸರ್ಗವನ್ನು ಶೀಘ್ರವಾಗಿ ನಾಶ ಮಾಡಲು ಮುಂದಾಗಿದ್ದಾನೆ ಎಂದು ಎಚ್ಚರಿಸಿದರು. ಪ್ರಾಂಶುಪಾಲರಾದ ಡಾ. ಲೀಲಾ ಅಪ್ಪಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.