ADVERTISEMENT

ಭ್ರಷ್ಟಾಚಾರ ವಿರುದ್ಧ ಗಾಳಿಪಟ ಸಮರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 10:15 IST
Last Updated 20 ಜೂನ್ 2011, 10:15 IST

ಮದ್ದೂರು: ಅಣ್ಣಾ ಹಜಾರೆ ಅವರ ಭ್ರಷ್ಟಚಾರ ವಿರೋಧಿ ಆಂದೋಲನ ಬೆಂಬಲಿಸಿ ಶನಿವಾರ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಗಾಳಿ ಪಟ ಹಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ಮಂಡ್ಯ ಜಿಲ್ಲಾ ಗಾಳಿಪಟ ಸಂಸ್ಥೆ ವತಿಯಿಂದ ಎರಡು ಬೃಹತ್ ಗಾಳಿ ಪಟ ತಯಾರಿಸಿ, ಅಣ್ಣಾ ಹಜಾರೆ ಹಾಗೂ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾವಚಿತ್ರವನ್ನು ಪಟಗಳಿಗೆ ಅಂಟಿಸಿ ಆಗಸಕ್ಕೆ ಹಾರಿ ಬಿಡಲಾಯಿತು.

ಅಸೋಸಿಯೇಷನ್ ಅಧ್ಯಕ್ಷ ಪ್ರದೀಪ್ ಮಾತನಾಡಿ, ಅಣ್ಣಾ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ನಮ್ಮ ಸಂಸ್ಥೆಯ ಬೆಂಬಲ ಇದೆ.

 ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ತೆರಳಿ ಗಾಳಿ ಪಟ ಹಾರಿ ಬಿಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದರು.

ಸಂಸ್ಥೆಯ ಸದಸ್ಯರಾದ ಪುನೀತ್, ರಘುನಂದನ್, ಮಹೇಶ್, ಮರಿಯಪ್ಪ, ಗಿರೀಶ್, ಪ್ರಸನ್ನ, ಮಂಜು, ಸಚಿನ್, ಸಂದೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.