ADVERTISEMENT

ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 5:42 IST
Last Updated 24 ಡಿಸೆಂಬರ್ 2012, 5:42 IST

ಕೃಷ್ಣರಾಜಪೇಟೆ: ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಉಳಿಯಲು ಸಾಧ್ಯ ಎಂದು ನ್ಯಾ. ಸಂತೋಷ್ ಹೆಗ್ಗಡೆ ಅಭಿಪ್ರಾಯಪಟ್ಟರು.


ತಾಲ್ಲೂಕಿನ ಹೇಮಗಿರಿಯಲ್ಲಿ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ವತಿಯಿಂದ ಆಯೋಜಿಸಿರುವ ಮೈಸೂರು ವಿಭಾಗ ಮಟ್ಟದ ಎರಡು ದಿನಗಳ ಅಧ್ಯಯನ ಶಿಬಿರದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.

ಮತದಾರರು ಆಮಿಷಗಳಿಗೆ ಬಲಿಯಾಗದೆ ಉತ್ತಮ ಅಭ್ಯರ್ಥಿಗಳಿಗೆ ಮತ ನೀಡಬೇಕು. ಭ್ರಷ್ಟಾಚಾರದ ವಿರುದ್ದ ರೈತರು, ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿಯಬೇಕೆಂದು ಸಲಹೆ ನೀಡಿದರು.

ರೈತಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮೈಸೂರು ವಿಭಾಗೀಯ ಮಟ್ಟದ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಓ
ವಿಶೇಷ ಆರ್ಥಿಕ ವಲಯ ಮತ್ತು ಅದರ ಸಾಮಾಜಿಕ ಪ್ರತಿಫಲನ ಕುರಿತು ಡಾ.ಚಂದ್ರಶೇಖರ್, ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಕುರಿತು ವೀರಭದ್ರಪ್ಪ ಬಿಸ್ಲಳ್ಳಿ, ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಕುರಿತು ಡಾ.ಶರತ್ಚಂದ್ರ, ಬಂಡವಾಳಶಾಹಿ ರಾಜಕಾರಣ ಮತ್ತು ಅದರ ಸಾಮಾಜಿಕ ಪ್ರತಿಫಲನ ಕುರಿತು ಪ್ರೊ.ಕೆ.ಸಿ.ಬಸವರಾಜು ಮತ್ತು ಭೂಸ್ವಾಧೀನ ಮಸೂದೆ ಕುರಿತು  ಪ್ರೊ.ರವಿವರ್ಮಕುಮಾರ್ ವಿಷಯ ಮಂಡನೆ ಮಾಡಿದರು.

ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ರೈತಸಂಘದ ಮುಖಂಡ  ಕೆ.ಎಸ್.ಪುಟ್ಟಣ್ಣಯ್ಯ, ಮುಖಂಡರಾದ ನಂದಿನಿ ಜಯರಾಂ, ಕೆ.ಎಸ್.ನಂಜುಂಡೇಗೌಡ, ಎಂ.ವಿ.ರಾಜೇಗೌಡ, ಕಾರಿಗನಹಳ್ಳಿ ಕುಮಾರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT