ADVERTISEMENT

ಮಂಡ್ಯ: ಅತಿಥಿ ಉಪನ್ಯಾಸಕರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 6:35 IST
Last Updated 1 ಮಾರ್ಚ್ 2011, 6:35 IST

ಮಂಡ್ಯ: ವೇತನ ಪರಿಷ್ಕರಣೆ ಮತ್ತು ಪ್ರತಿ ತಿಂಗಳು ನಿಗದಿತ ವೇಳೆಗೆ ವೇತನ ಪಾವತಿಸಬೇಕು ಎಂಬುದು ಸೇರಿದಂತೆ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಪಡಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಸೋಮವಾರ ನಗರದಲ್ಲಿ ಪ್ರತಿಭಟಿಸಿದರು. ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿದ ಅತಿಥಿ ಉಪನ್ಯಾಸಕರು, ಅತಿಥಿ ಉಪನ್ಯಾಸಕರ ಸೇವೆಯನ್ನು ಕೂಡಲೇ ಕಾಯಂ ಮಾಡಬೇಕು ಮತ್ತು ಇವರ ಸೇವೆಯನ್ನು ಕಡ್ಡಾಯವಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹ ಪಡಿಸಿ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸಿದರೂ ಸರ್ಕಾರ ಇತ್ತ ಗಮನಹರಿಸಿಲ್ಲ. ಇನ್ನಾದರೂ ಸರ್ಕಾರ, ಸಂಬಂಧಿಸಿದ ಸಚಿವಾಲಯ  ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರಕ್ಕೆ ಒತ್ತಾಯಿಸುವ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಯನ್ನು ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಜಿ.ವಿ.ರಮೇಶ್, ಮಮತಾ, ಸತೀಶ್, ಧನಂಜಯ್, ಎಸ್.ಮಂಜು, ರವಿ ಕುಮಾರ್, ವಿನಯ್‌ಕುಮಾರ್  ಇತರರು  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಅಗ್ನಿಶಾಮಕ ಸೇವೆ ಪಡೆಯಿರಿ’
ಮಂಡ್ಯ: ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆಯ ಬದಲಿಗೆ ಆರ ಕ್ಷಕ ಮತ್ತು ಅಗ್ನಿಶಾಮಕ ಸೇವೆ ಯನ್ನೂ ಪಡೆಯಲು ಸಾರ್ವಜನಿಕರು ಶುಲ್ಕರಹಿತವಾದಿ ದೂರವಾಣಿ 108 ಕ್ಕೆ ಕರೆ ಮಾಡಬಹುದು ಎಂದು ಡಿಸಿ ಡಾ. ಪಿ.ಸಿ.ಜಾಫರ್ ಅಭಿಪ್ರಾಯ ಪಟ್ಟರು. ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮ ವಾರ 108 ಕರೆಯ ಕಾರ್ಯಕಾರಿ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯ ಕ್ಷತೆಯನ್ನು ವಹಿಸಿ ಮಾತನಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿ ಕಾರಿ ರಾಜಣ್ಣ, ಇಎಂಆರ್‌ಐನ ರಮೇಶ್, ಗುರುರಾಜ್, ಲಿಯೋ ನಾರ್ಡ್ ಪೀಟರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.