ADVERTISEMENT

ಮಿಮ್ಸ್: ಪಾರದರ್ಶಕ ತನಿಖೆಗೆ ವಿದ್ಯಾರ್ಥಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 9:25 IST
Last Updated 16 ಮಾರ್ಚ್ 2011, 9:25 IST

ಮಂಡ್ಯ: ಬೋಧಕ ಸಿಬ್ಬಂದಿ ನಡುವಣ ಗುಂಪು ಗಾರಿಕೆ, ಅಧಿಕಾರ ದುರುಪಯೋಗ, ದುರ್ಬಳಕೆ ಬೆಳವಣಿಗೆ ಹಿನ್ನೆಲೆಯಲ್ಲಿ ಸುದ್ದಿಗೆ ಗ್ರಾಸವಾಗುತ್ತಿದ್ದ ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈಗ ಬೀದಿಗಿಳಿದಿದ್ದು, ಕಾಲೇಜಿನ ಬೋಧಕರ ಸಮರ್ಥನೆಗೆ ನಿಂತಿದ್ದಾರೆ. ಪ್ರಗತಿಪರ ಚಿಂತಕರು ಎಂದು ಹೇಳಿಕೊಂಡ ಕೆಲವರು, ಮಿಮ್ಸ್‌ನ ಬೋಧಕರು ಸರಿಯಾಗಿ ಪಾಠ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ. ಇದು, ಸತ್ಯಕ್ಕೆ ದೂರವಾದುದು. ಎಲ್ಲ ಬೋಧಕರು ಚೆನ್ನಾಗಿ ಪಾಠ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಸಮರ್ಥಿಸಿ ಕೊಂಡಿದ್ದಾರೆ.

ಅಲ್ಲದೆ, ಕಾಲೇಜಿನ ಒಟ್ಟು ಬೆಳವಣಿಗೆಗಳ ಕುರಿತು ಪಾರದರ್ಶಕವಾದ ರೀತಿಯಲ್ಲಿ ತನಿಖೆಯನ್ನು ನಡೆಸಬೇಕು ಹಾಗೂ ಎಲ್ಲರಿಗೂ ಸತ್ಯ ತಿಳಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ ಮನವಿಯನ್ನು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಅರ್ಪಿಸಿದರು. ಮಿಮ್ಸ್ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ನಡೆಸಿದರು. ಕೆಲವರು ಕಾಲೇಜಿನ ಬಗೆಗೆ ಪದೇ ಪದೇ ಹೇಳಿಕೆ ನೀಡುತ್ತಿರುವುದರಿಂದ ಕಾಲೇಜಿನ ವರ್ಚಸ್ಸಿಗೆ ಧಕ್ಕೆಯಾಗಿದೆ. ನಮ್ಮ ಪೋಷಕರು ಈ ಬೆಳವಣಿಗೆಗಳಿಂದ ಚಿಂತಿತರಾಗಿ ್ದದಾರೆ ಎಂದು ಹೇಳಿದ್ದಾರೆ.

ಕಾಲೇಜು ಮತ್ತು ಆಡಳಿತದ ವಿರುದ್ಧ ಕಳೆದ ಐದು ವರ್ಷಗಳಿಂದ ಆರೋಪ ಮಾಡ ಲಾಗುತ್ತಿದೆ. ಆದರೆ, ಮಿಮ್ಸ್‌ನ ಬೋಧ ಕರು ಪರಿಣಿತರಾಗಿದ್ದು, ಅನುಭವಿಗಳಾಗಿದ್ದಾರೆ. ನಿಯಮಿತವಾಗಿ ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದು, ಅತ್ಯುತ್ತಮವಾಗಿ ಪಾಠ ಮಾಡು ತ್ತಿದ್ದಾರೆ. ಅವರನ್ನು ಕಳೆದುಕೊಂಡರೇ ನಮಗೆ ನಷ್ಟ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಹೊರಗಿನ ಶಕ್ತಿಗಳು ಮತ್ತು ಮಾಧ್ಯಮಗಳು ಕೂಡಾ ಕಾಲೇಜಿನ ಬೆಳವಣಿಗೆ ಯಲ್ಲಿ ಮಧ್ಯ ಪ್ರವೇಶಿಸಬಾರದು. ತನಿಖೆ ನಡೆಸುವುದು ಸೇರಿದಂತೆ  ಈ ಎಲ್ಲ ಬೇಡಿಕೆಗಳ ಬಗೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ವಿದ್ಯಾರ್ಥಿಗಳಿಗೆ ನೋಟಿಸ್: ಈ ನಡುವೆ ಬೋಧಕರ ಪರವಾಗಿ ಬುಧವಾರ ಬೀದಿ ಗಿಳಿದಿದ್ದ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ ಮಾಡಲು ಮಿಮ್ಸ್ ಆಡಳಿತ ನಿರ್ಧರಿಸಿದೆ.
‘ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರು ವುದು ನನ್ನ ಗಮನಕ್ಕೆ ಬಂದಿರ ಲಿಲ್ಲ. ಅನು ಮತಿಯನ್ನು ಪಡೆದಿರ ಲಿಲ್ಲ. ಇದು ಅಶಿಸ್ತು ಆಗುತ್ತದೆ. ಹೀಗಾಗಿ, ನೋಟಿಸ್ ನೀಡುತ್ತಿ ದ್ದೇನೆ’ ಎಂದು ಮಿಮ್ಸ್ ನಿರ್ದೇಶಕಿ ಡಾ. ಪುಷ್ಪಾ ಸರ್ಕಾರ್ ಹೇಳಿದರು.

ಮಿಮ್ಸ್ ವಿರುದ್ಧ ಆರೋಪ ಮಾಡಿದ್ದ ಪ್ರಗತಿಪರ ಚಿಂತಕರ ಒಕ್ಕೂಟದ ವಿರುದ್ಧ ಬೀದಿಗಿಳಿದಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ಸಮೀಪದ ಠಾಣಾಧಿ ಕಾರಿಗಳ ಅನುಮತಿಯನ್ನು ಪಡೆದಿರಲಿಲ್ಲ ಎಂದು ಹೇಳಲಾಗಿದೆ. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿಯೂ ವಿದ್ಯಾರ್ಥಿಗಳು ತಮ್ಮ ಹೆಸರನ್ನು ದಾಖಲಿಸಿಲ್ಲ. ಅಲ್ಲದೆ, ಪ್ರತಿಭಟನೆಯ ನಂತರವು ಮಾಧ್ಯಮಗಳ  ಜೊತೆಗೆ ಮಾತ ನಾಡಲೂ ವಿದ್ಯಾರ್ಥಿಗಳು ನಿರಾಕರಿಸಿದರು.

ಶೀಥಲ ಸಮರ: ಮಿಮ್ಸ್ ಬೋಧಕರ ನಡುವೆ ಇರುವ ಶೀಥಲ ಸಮರ ಮಂಗಳವಾರ ಜಿಲ್ಲಾಧಿಕಾರಿಗಳ ಎದುರಿಗೇ ಬಹಿರಂಗ ಗೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಮಂಗಳವಾರ ಮಿಮ್ಸ್ ಸಭಾಂಗಣ ದಲ್ಲಿ ನಡೆದ ಕೋರ್ಸ್ ಪೂರೈಸಿದ ವಿದ್ಯಾರ್ಥಿ ಗಳಿಗೆ ತರಬೇತಿ ಕಾರ್ಯಕ್ರಮ ಅಸಮಾಧಾನ ಹೊರಬರಲು  ವೇದಿಕೆಯಾಗಿದೆ. ಅಂದು ಜಿಲ್ಲಾಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಮಿಮ್ಸ್ ನಿರ್ದೇಶಕಿ ಡಾ. ಪುಷ್ಪಾ ಸರ್ಕಾರ್, ವೈದ್ಯಕೀಯ ಅಧೀಕ್ಷಕ ಡಾ. ರಾಮಲಿಂಗೇಗೌಡ ಅವರೂ ಇದ್ದರು. ಮಾಹಿತಿಗಳ ಪ್ರಕಾರ, ಯಾರು ಚೆನ್ನಾಗಿ ಪಾಠ ಮಾಡುತ್ತಾರೆ ಎಂದು ಹಿರಿಯ ಪ್ರೊಫೆಸ ರೊಬ್ಬರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

ಆದರೆ, ಇದಕ್ಕೆ ಆಕ್ಷೇಪಿಸಿದ ರಾಮಲಿಂಗೇ ಗೌಡರು ಇದು ವೇದಿಕೆಯೂ ಅಲ್ಲ, ಅದನ್ನು ಇಲ್ಲಿ ಪ್ರಸ್ತಾಪಿಸಬೇಕಾಗೂ ಇಲ್ಲ. ಅದಕ್ಕೆ ಬೇರೆಯದೇ ವೇದಿಕೆ ಇದೆ ಎಂದು ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳು ಕೂಡಾ, ಇಂಥದೇ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ. ಈ ಕುರಿತು ಪ್ರಶ್ನಿಸಿದಾಗ, ಅಂದು ಕಾರ್ಯಕ್ರಮದಲ್ಲಿ ಡಾ. ನಂದೀಶ್ ಅವರ ಮಾತಿಗೆ ಆಕ್ಷೆಪ ವ್ಯಕ್ತಪಡಿಸಿದ್ದು ನಿಜ ಎಂದು ಡಾ. ರಾಮಲಿಂಗೇಗೌಡ  ದೃಢಪಡಿಸಿದರು. ಈ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.