ADVERTISEMENT

ಮೇಲುಕೋಟೆ: ಸಂಭ್ರಮದ ಚಿನ್ನದ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 9:30 IST
Last Updated 18 ಮಾರ್ಚ್ 2014, 9:30 IST

ಮೇಲುಕೋಟೆ: ಆಚಾರ್ಯ ರಾಮಾನುಜರ ಕಾಲದಿಂದ ಅನೂಚಾನ ಪದ್ಧತಿಯಂತೆ ನಡೆದು ಬಂದ ರಥೋತ್ಸವದ ರಾತ್ರಿ ಬಂಗಾರದ ಪಲ್ಲಕ್ಕಿ ಉತ್ಸವವನ್ನು ಹರಿಜನರು ಭಾನುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನಡೆಸಿಕೊಟ್ಟರು.

ರಾತ್ರಿ 9.15ಕ್ಕೆ ಆರಂಭವಾದ ಉತ್ಸವ ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಮೈಸೂರು ಅಶೋಕಪುರಂನ ಕಾಳಿಕಾಂಬ ಟ್ರಸ್ಟ್  ನಿರಂತರವಾಗಿ ನಡೆಸುತ್ತಾ ಬಂದಿರುವ ಈ ಉತ್ಸವದಲ್ಲಿ ಟ್ರಸ್ಟ್ ಮುಖಂಡರು, ಪದಾಧಿಕಾರಿಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಹರಿಜನ ಭಕ್ತರು ಭಾಗವಹಿಸಿದ್ದರು.

ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಚಲುವರಾಯಸ್ವಾಮಿಯ ರಥವನ್ನು ಸಂಪೂರ್ಣ ಹರಿಜನರೇ ಎಳೆದರು. ಅದು ನಿಷ್ಠೆಯಿಂದ ಕೂಡಿತ್ತು. ಅದೂ ಅಲ್ಲದೇ ಹರಿಜನರೇ ಮಂಗಳವಾದ್ಯವನ್ನೂ ನುಡಿಸಿ ಸ್ವಾಮಿಯ ಉತ್ಸವಕ್ಕೆ ಮೆರುಗು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.