ಮಂಡ್ಯ: ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ವಿಭಾಗ ಸ್ಪೋರ್ಟ್ಸ್ ಕೌನ್ಸಿಲ್ (ಪಿಜಿಎಸ್‌ಸಿ) ತಂಡವು ಇಲ್ಲಿಯ ಸರ್ಕಾರಿ ಕಾಲೇಜು ಆಶ್ರಯದಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗಳಿಸಿತು.
ವಿವಿಯ ಐದು ವಲಯಗಳ ತಂಡಗಳ ನಡುವೆ ನಡೆದ ಕೂಟದಲ್ಲಿ ಪಿಜಿಎಸ್‌ಸಿ ತಂಡವು ಒಟ್ಟು 45 ಅಂಕಗಳನ್ನು ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಆತಿಥೇಯ ಸರ್ಕಾರಿ ಕಾಲೇಜು 14 ಮತ್ತು ಮೈಸೂರಿನ ಮಹಾಜನ ಕಾಲೇಜು 13 ಅಂಕಗಳನ್ನು ಗಳಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪೆಡೆದವು.
ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ‘ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಶಿಸ್ತು ಹಾಗೂ ಪರಿಶ್ರಮ ಮನೋಭಾವ ಬೆಳೆಯತ್ತದೆ’ ಎಂದರು.
ಪ್ರಾಂಶುಪಾಲ ಪ್ರೊ.ಡಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ಕೃಷ್ಣ, ಕ್ರೀಡಾ ಸಮಿತಿ ಸದಸ್ಯರಾದ ಎನ್.ರಮೇಶ್, ಸಿ.ಎಸ್. ಮೋಹನ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಫಲಿತಾಂಶಗಳು
ಬ್ಯಾಡ್ಮಿಂಟನ್: ಪಿಜಿಎಸ್‌ಸಿ (ಮಾನಸ ಗಂಗೋತ್ರಿ, ಮೈಸೂರು)–1, ಮಹಾಜನ ಕಾಲೇಜು ಎಸ್‌ಬಿಆರ್ಆರ್ (ಮೈಸೂರು)–2, ಸರ್ಕಾರಿ ಕಾಲೇಜು (ಮಂಡ್ಯ)–3; ಬಾಲ್ ಬ್ಯಾಡ್ಮಿಂಟನ್: ಪಿಇಜಿಎಸ್‌ಸಿ (ಮಾನಸ ಗಂಗೋತ್ರಿ)–1, ಸೋಮಾನಿ ಕಾಲೇಜು (ಮೈಸೂರು)–2, ಚನ್ನರಾಯಪಟ್ಟಣದ ಜಿಎಫ್ಜಿಸಿ–3. ಬ್ಯಾಸ್ಕೆಟ್‌ಬಾಲ್: ಸರ್ಕಾರಿ ಕಾಲೇಜು (ಮಂಡ್ಯ)–1, ಪಿಜಿಎಸ್‌ಸಿ(ಮೈಸೂರು)–2, ಎಸ್ಎಂಎಫ್‌ಜಿಸಿ (ಕೊಳ್ಳೇಗಾಲ)–3.
ಚೆಸ್: ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು(ಮೈಸೂರು)–1, ಸರ್ಕಾರಿ ಕಾಲೇಜು (ಮಂಡ್ಯ)–2, ಜಿಎಫ್‌ಜಿಸಿ (ನಂಜನಗೂಡು)–3. ಕ್ರಿಕೆಟ್: ಪಿಜಿಎಸ್‌ಸಿ (ಮಾನಸಗಂಗೋತ್ರಿ, ಮೈಸೂರು)–1, ಮಹಾರಾಜ ಕಾಲೇಜು (ಮೈಸೂರು)–2, ಎಫ್‌ಜಿಸಿ (ಹಾಸನ)–3 ಫುಟ್‌ಬಾಲ್: ಸೋಮಾನಿ ಕಾಲೇಜು (ಮೈಸೂರು)–1. ಯುವರಾಜ ಕಾಲೇಜು (ಮೈಸೂರು)–2. ಪಿಇಎಸ್ ವಿಜ್ಞಾನ ಕಾಲೇಜು (ಮಂಡ್ಯ)–3; ಹ್ಯಾಂಡ್‌ಬಾಲ್:ಪಿಜಿಎಸ್‌ಸಿ (ಮಾನಸಗಂಗೋತ್ರಿ ಮೈಸೂರು)–1, ಸರ್ಕಾರಿ ಕಾಲೇಜು (ಮಂಡ್ಯ)–2 ಎಂಸಿಎಂ (ಮೈಸೂರು)–3. ಹಾಕಿ: ಮಹಾರಾಜ ಕಾಲೇಜು (ಮೈಸೂರು)–1 ಸೆಂಟ್ ಫಿಲೋಮಿನಾ (ಮೈಸೂರು)–2. ಸರ್ಕಾರಿ ಕಾಲೇಜು (ಮಂಡ್ಯ)–3.
ಕಬಡ್ಡಿ: ಪಿಜಿಎಸ್‌ಸಿ (ಮೈಸೂರು)–1, ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು (ಮೈಸೂರು)–2, ಎಸ್ಎಎಫ್ ಜಿಎಸ್ (ಚನ್ನರಾಯಪಟ್ಟಣ) –3. ಕೊಕ್ಕೊ: ಜಿಎಸಿ (ಹಾಸನ)–1, ಪಿಜಿಎಸ್‌ಸಿ (ಮೈಸೂರಿನ ಮಾನಸಗಂಗೋತ್ರಿ)–2. ಜಿಎಫ್ಜಿಸಿ (ಕ್ಯಾತನಹಳ್ಳಿ)–3. ಸಾಫ್ಟ್‌ಬಾಲ್: ಪಿಜಿಎಸ್‌ಸಿ (ಮಾನಸಗಂಗೋತ್ರಿ ಮೈಸೂರು)–1,ಜೆಎಸ್ಎಸ್ (ಮೈಸೂರು)–2. ಜಿಎಫ್ಜಿಸಿ (ಭಾರತೀನಗರ)–3. ಟೇಬಲ್ ಟೆನಿಸ್: ಎಸ್ಬಿಆರ್ಆರ್ ಮಹಾಜನ ಕಾಲೇಜು (ಮೈಸೂರು)–1, ಪಿಜಿಎಸ್‌ಸಿ (ಮಾನಸಗಂಗೋತ್ರಿ, ಮೈಸೂರು)–2, ಸರ್ಕಾರಿ ಕಾಲೇಜು (ಮಂಡ್ಯ)–3. ಟೆನಿಸ್: ಎಸ್ಬಿಆರ್ಆರ್ ಮಹಾಜನ ಕಾಲೇಜು (ಮೈಸೂರು)–1, ಪಿಇಎಸ್ ವಿಜ್ಞಾನ ಕಾಲೇಜು (ಮಂಡ್ಯ)–2. ವಾಲಿಬಾಲ್: ಪಿಜಿಎಸ್‌ಸಿ (ಮಾನಸಗಂಗೋತ್ರಿ, ಮೈಸೂರು)–1, ಜಿಎಫ್‌ಜಿಸಿ (ಉದಯಪುರ)–2. ಜೆಎಸ್ಎಸ್ (ಮೈಸೂರು)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.