ADVERTISEMENT

ರೈತರ ಶ್ರಮಕ್ಕೆ ಸರ್ಕಾರ ಅಗೌರವ: ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 5:26 IST
Last Updated 1 ಏಪ್ರಿಲ್ 2013, 5:26 IST

ಪಾಂಡವಪುರ: ಯಾವುದೇ ಹಣ ಅಧಿಕಾರದ ಹಿಂದೆ ಬೀಳದೆ ಕಳೆದ 30 ವರ್ಷಗಳಿಂದ ರೈತರ ಪರವಾಗಿ ನಿರಂತರ ಹೋರಾಟ ನಡೆಸುತ್ತಿರುವ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಕ್ಷೇತ್ರದ ಜನತೆ ಸತತವಾಗಿ 3 ಬಾರಿ ಸೋಲಿಸಿ ದೊಡ್ಡ ತಪ್ಪು ಮಾಡಿದ್ದೇವೆ ಎಂದು ಬನ್ನಂಗಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರೇವಣ್ಣ ಹೇಳಿದರು.

ತಾಲ್ಲೂಕಿನ ಗಿರಿಯಾರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ರೈತರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. 
ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ದೇಶಕ್ಕೆ ಅನ್ನ ನೀಡುತ್ತಿರುವ ಎಲ್ಲ ಬಗೆಯ ಶ್ರಮಿಕರನ್ನು ಕಡೆಗಣಿಸಿರುವ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಒಂದು ರೀತಿಯಲ್ಲಿ ಶ್ರಮಕ್ಕೆ ಗೌರವ ಸಲ್ಲಿಸಿದೆ ಹರಾಜು ಹಾಕುತ್ತಿದ್ದಾರೆ. ಇದರ ವಿರುದ್ಧ ಜನಾಂದೋಲನ ಆಗಬೇಕಿದೆ ಎಂದರು.

ಮುಖಂಡರಾದ ರಾಮಕೃಷ್ಣ, ಪುಟ್ಟರಾಜು, ಶ್ರೀಕಂಠೇಗೌಡ, ಬೋರೇಗೌಡ, ಸಿದ್ದೇಗೌಡ, ನಾರಾಯಣಗೌಡ, ಮರೀಗೌಡ, ಬೋರಯ್ಯ, ಹಾಳೇಗೌಡ, ತಿಮ್ಮೇಗೌಡ, ಬೆಟ್ಟೇಗೌಡ, ರಾಚಯ್ಯ, ಕುಮಾರ, ನಾಗಣ್ಣ, ಸ್ವಾಮಣ್ಣ, ಡಿಂಕ ಮುನಿಯಪ್ಪ, ಬಿ.ಟಿ.ಮಂಜುನಾಥ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.