ADVERTISEMENT

ರೈತ ಹೋರಾಟಗಾರ ಅಶೋಕ್‌ಗೆ ಗೀತ ನಮನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 8:36 IST
Last Updated 9 ಡಿಸೆಂಬರ್ 2013, 8:36 IST

ಮದ್ದೂರು: ರೈತ ಹೋರಾಟಗಾರ ವಿ. ಅಶೋಕ್ ನಿಧನದಿಂದ ಜಿಲ್ಲೆಯಲ್ಲಿ ಹೋರಾಟದ ಕಸವು ಒಂದಿಷ್ಟು ಕಳೆದುಕೊಂಡಿದೆ ಎಂದು ತಹಶೀಲ್ದಾರ್‌ ಸಿ.ಎನ್‌. ಜಗದೀಶ್‌ ಹೇಳಿದರು.

ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಹುಟ್ಟು ಸಾವು ಈ ಬಾಳಿಗೆ ಎರಡು ಕೊಂಡಿಗಳಾಗಿದ್ದು, ಸಾವಿಗೆ ಮುನ್ನ ನಾವು ಮಾಡುವ ಕೆಲಸವೇ ನಮ್ಮ ಹೆಸರನ್ನು ಇಲ್ಲಿ ಚಿರಸ್ಥಾಯಿಯಾಗಿ ಉಳಿಸುತ್ತದೆ ಎಂದರು.

ವಳಗೆರೆಹಳ್ಳಿ ಚಿಕ್ಕಮ್ಮ ಸೇವಾ ಸಮಿತಿಯ ಭಾನು ಪ್ರಕಾಶ್ ಹಾಗೂ ಹೇಮಶಿವಪ್ಪ ತಂಡದಿಂದ ಅಖಂಡ ಭಜನೆ ಹಾಗೂ ರಂಗಭೂಮಿ ಕಲಾವಿದರಿಂದ ಗೀತ ನಮನ ಕಾರ್ಯಕ್ರಮ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್‌, ತಾಲ್ಲೂಕು ಅಧ್ಯಕ್ಷ ಅಶೋಕ್, ಮುಖಂಡರಾದ ನಗರಕೆರೆ ಶೇಖರ್, ವಾಸು, ಕೃಷ್ಣಪ್ಪ, ಉಮೇಶ್, ಬೋರಪ್ಪ, ಜಗ್ಗಿಶೀನಪ್ಪ, ಚಿಕ್ಕಮರಿಯಪ್ಪ, ವೆಂಕಟೇಶಚಾರಿ, ಉಮೇಶ್, ಸುರೇಶ್, ಚೆನ್ನಪ್ಪ ಇತರರು ಹಾಜರಿದ್ದರು.

ಗ್ರಾಮಸ್ಥರಿಂದ ಶ್ರದ್ಧಾಂಜಲಿ:
ತಾಲ್ಲೂಕಿನ ವಳಗೆರೆಹಳ್ಳಿಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಿ. ಅಶೋಕ್ ಅವರಿಗೆ ಗ್ರಾಮಸ್ಥರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದರು. ಗ್ರಾಮದ ಹಿರಿಯ ಮುಖಂಡ ವಿ.ಸಿ. ಬೋರೇಗೌಡ ಅಶೋಕ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಸ್. ದಯಾನಂದ, ಕೆಎಂಎಫ್ ಪುಟ್ಟರಾಜು, ಶೀನಪ್ಪ, ರಮೇಶ್, ಗಿರೀಶ್, ಕುಮಾರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.