ಭಾರತೀನಗರ (ಮಂಡ್ಯ): ಉದ್ಯೋಗ, ಲಾಭದ ದೃಷ್ಟಿಯಿಂದ ಮಾತ್ರ ಶಿಕ್ಷಣವನ್ನು ನೀಡಿದರೆ, ಅದು ಸಮಾ ಜಕ್ಕೆ ಮಾರಕವಾಗುತ್ತದೆ ಎಂದು ಕಂಪೆನಿ ವ್ಯವಹಾರ ಖಾತೆ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯ ಪಟ್ಟರು.
ಮಂಡ್ಯ ಜಿಲ್ಲೆಯ ಭಾರತೀನಗರದಲ್ಲಿ ಭಾರತೀ ಎಜ್ಯಕೇಷನ್ ಟ್ರಸ್ಟ್‌ನ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಮೌಲ್ಯ ಹಾಗೂ ಪರಸ್ಪರ ಪ್ರೀತಿಯಿಂದ ನೋಡುವ ಮನೋಭಾವವನ್ನೂ ಬೆಳೆಸಬೇಕು ಎಂದು ಅವರು ಕರೆ ನೀಡಿದರು.
ಯಾವ ಮಗವೂ ದಡ್ಡ ಇರುವುದಿಲ್ಲ. ಮಕ್ಕಳಲ್ಲಿ ಇರುವ ಶಕ್ತಿಯನ್ನು ಗುರು ತಿಸಿ, ಪ್ರೋತ್ಸಾಹಿಸಬೇಕು. ಜೀವನ ವನ್ನು ಬದಲಾಯಿಸುವ ಶಕ್ತಿ ಶಿಕ್ಷಣ ಕ್ಕಿದೆ. ಮಕ ್ಕಳಲ್ಲಿ ಸಕರಾತ್ಮಕ ಚಿಂತನೆ ಗಳನು ಬೆಳೆಸಬೇಕು. ಹತಾಶೆ, ದ್ವೇಷ ಭಾವ ೆಗಳನ್ನು ಸಂಸ್ಕಾರ ನೀಡುವ ಮೂಲಕ ದೂರ ಮಾಡಬೇಕು ಎಂದರು.
ಶಿಕ್ಷಣದ ಗುಣಮಟ್ಟ ಹೆಚ್ಚಾಗ ಬೇಕಾದರೆ ಉತ್ತಮ ಶಿಕ್ಷಕರು ಇರುವುದು ಅವಶ್ಯ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಔನ್ನತ್ಯ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ಅವಶ್ಯವಿರುವ ತರಬೇತಿ ಕೊಡಿಸಬೇಕು. 2020ರ ವೇಳೆಗೆ ಭಾರತವು ಸರಾಸರಿ ವಯಸ್ಸಿನ ಪ್ರಮಾಣ 29 ಆಗಲಿದೆ. ಯುವ ಶಕ್ತಿಯ ದೇಶವಾಗಲಿದೆ ಎಂದು ಹೇಳಿದರು.
ಮಾಜಿ ಸಂಸದ ಜಿ. ಮಾದೇಗೌಡ ಅವರು ಸಣ್ಣ ಪಟ್ಟಣದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ, ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮಾಜಿ ಸಚಿವ, ಶಾಸಕ ಡಿ.ಕೆ. ಶಿವಕುಮಾರ್ ಮಾತನಾಡಿ, ಶಾಸಕರಾಗಿ ಕ್ಷೇತ್ರದ ಜನರಿಗೆ ಏನು ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಯಾಗಿದೆ. ಶಿಕ್ಷಣ ನೀಡುವ ಮೂಲಕ ಕತ್ತಲದಲ್ಲಿದ್ದವರನ್ನು ಬೆಳಕಿನಡೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಎಷ್ಟು ವರ್ಷ ಅಧಿಕಾರದಲ್ಲಿ ಇದ್ದೇವು. ಎಂಬುದು ಮುಖ್ಯ. ಅಧಿಕಾರ ದಲ್ಲಿದ್ದಾಗ ಏನು ಮಾಡಿದ್ದೇವೆ ಎಂಬುದು ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಮಧು ಮಾದೇಗೌಡ ಅವರು ಸಂಸ್ಥೆ ಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿ ್ದದಾರೆ. ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಸಂಸದ ಎನ್ ಚಲುವರಾಯಸ್ವಾಮಿ ಮಾತನಾಡಿ, ಸಮಾಜದಲ್ಲಿ ಮೌಲ್ಯಗಳು ಕಾಣೆಯಾಗುತ್ತಿವೆ. ಆದ್ದರಿಂದ ಮೌಲ್ಯಾ ಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ದೇಶಭಕ್ತಿಯನ್ನು ಬೆಳೆಸ ಬೇಕು ಎಂದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ. ಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ. ಮರಿತಿಬ್ಬೇಗೌಡ, ಬಿ.ರಾಮಕೃಷ್ಣ, ಕಲ್ಪನಾ ಸಿದ್ದರಾಜು, ಎಂ.ಪಿ. ನರೇಂದ್ರಸ್ವಾಮಿ, ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ ಎಂ.ಟಿ. ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಸಿದ್ದಪ್ಪ, ಕಾರ್ಯನಿರ್ವಾಹಕ ಟ್ರಸ್ಟಿ ಮಧು ಮಾದೇಗೌಡ, ಪ್ರೊ.ವಿ.ಜಿ. ತಳವಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.