ADVERTISEMENT

ವಿದ್ಯಾರ್ಥಿಯಿಂದ ಸೋಲಾರ್ ದೀಪ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 8:15 IST
Last Updated 19 ಫೆಬ್ರುವರಿ 2012, 8:15 IST

ಶ್ರೀರಂಗಪಟ್ಟಣ: ತಾಲ್ಲೂಕಿನ ನಗುವನ ಹಳ್ಳಿ ಬಳಿ ಇರುವ ಮಹಾರಾಜ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ನವೀನ ತಂತ್ರ ಜ್ಞಾನದ ಸೋಲಾರ್ ದೀಪವನ್ನು ಅಭಿವೃದ್ಧಿಪಡಿಸಿದ್ದಾನೆ.

ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದಲ್ಲಿ 6ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ತೇಜಸ್ ಸಿ.ರಾಮ್ ಉತ್ತಮ ದಕ್ಷತೆ ಹೊಂದಿರುವ ಸೋಲಾರ್ ದೀಪವನ್ನು ಸಂಶೋಧಿಸಿದ್ದಾನೆ. `11 ಗಂಟೆಗಳ ಕಾಲ ಬೆಳಗಬಲ್ಲ ಹಾಗೂ ನೈಟ್ ಸ್ವಿಚ್ (ಬೆಳಕಿನಲ್ಲಿ ಆರಿ ಕತ್ತಲಲ್ಲಿ ಹೊತ್ತಿ ಕೊಳ್ಳುವ) ದೀಪವನ್ನು ಅಭಿವೃದ್ಧಿಪಡಿ ಸಿದ್ದೇನೆ. ಈಗ ಮಾರುಕಟ್ಟೆಯಲ್ಲಿ ಲಭ್ಯ ಇರುವ ಸೋಲಾರ್ ದೀಪಗಳ ಅರ್ಧ ಬೆಲೆಗೆ ಮರಾಟ ಮಾಡುವ ಉದ್ದೇಶ ಹೊಂದಿದ್ದೇನೆ~ ಎಂದು ತೇಜಸ್ ಹೇಳುತ್ತಾನೆ.

ತಾಲ್ಲೂಕಿನ ನಗುವನಹಳ್ಳಿ ಮತ್ತು ಬೆಳವಾಡಿ ಗ್ರಾಮಗಳಿಗೆ ತೇಜಸ್ ಅಭಿವೃದ್ಧಿಪಡಿಸಿರುವ ತಲಾ ಒಂದೊಂದು ಸೋಲಾರ್ ದೀಪಗಳನ್ನು ಉಚಿತವಾಗಿ ಅಳವಡಿಸುವ ಕಾರ್ಯಕ್ಕೆ ಎಂಐಟಿ ಕಾಲೇಜಿನ ಅಧ್ಯಕ್ಷ ಎಸ್.ಮುರಳಿ ಶುಕ್ರವಾರ ಚಾಲನೆ ನೀಡಿದರು.
 
ಕಾಲೇಜಿನಿಂದ ತೇಜಸ್‌ಗೆ ಎಲ್ಲ ರೀತಿಯ ಸಹಕಾರ ನೀಡಲಾ ಗುವುದು ಎಂದು ಹೇಳಿದರು. ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೆಂಕಟೇಶ್, ನಗುವನಹಳ್ಳಿ ಗ್ರಾ.ಪಂ. ಅಧ್ಯಕ್ಷ ಜವರಪ್ಪ, ಸದಸ್ಯ ಶಿವಕುಮಾರ್, ಲತಾ, ಎನ್.ಶಿವಸ್ವಾಮಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂದೀಪ್ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.