ADVERTISEMENT

ಶಿಕ್ಷಣವೆಂದರೆ ಬರೀ ಪುಸ್ತಕವಲ್ಲ: ವೆಂಕಟಕೃಷ್ಣ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 6:05 IST
Last Updated 25 ಜನವರಿ 2012, 6:05 IST

ಮಳವಳ್ಳಿ: ತಾಲ್ಲೂಕಿನ ಧನಗೂರು ಶಿವಕವಿ ಷಡಕ್ಷರದೇವ ವಿದ್ಯಾ ಟ್ರಸ್ಟ್, ವೀರಸಿಂಹಾಸನ ಮಠ ಆಶ್ರಯದಲ್ಲಿ ಭಾನುವಾರ ಶಿವಕವಿ ಷಡಕ್ಷರದೇವ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವ, ಹಾಡ್ಲಿ ಕ್ಲಸ್ಟರ್ ಮಟ್ಟದ ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ , ಭಾವಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಾಹಿತಿ ತೈಲೂರು ವೆಂಕಟಕೃಷ್ಣ ಉದ್ಘಾಟಿಸಿ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪುಸ್ತಕವಲ್ಲ ಅದು ಜ್ಞಾನ ಭಂಡಾರ. ಕವಿ ಷಡಕ್ಷರಕವಿ ನೆಲೆಸಿದ್ದ ಇಂತಹ ಸ್ಥಳದಲ್ಲಿ ಅವರ ಹೆಸರಿನಲ್ಲಿ ಶಿಕ್ಷಣ ಪ್ರಾರಂಭವಾಗಿರುವುದು ಹೆಮ್ಮೆ ಎನಿಸಿದೆ ಎಂದರು.

ಸ್ಪರ್ಧೆ: ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ಅವಿಭಕ್ತ ಕುಟುಂಬ ಪದ್ಧತಿಯೇ ಇಂದಿನ ಅನಿವಾರ್ಯ ಎಂಬ ವಿಷಯವಾಗಿ ಚರ್ಚಾಸ್ಪರ್ಧೆ ಏರ್ಪಡಿಸಿದ್ದು, ಶಿವಕವಿ ಷಡಕ್ಷರದೇವ ವಿದ್ಯಾಸಂಸ್ಥೆಯ ಚೈತ್ರ (ಪ್ರಥಮ), ಮಹೇಶ್ವರಿ.ವೈ(ದ್ವಿತೀಯ) ಹಾಗೂ ಕೋಡಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅನುಷಾ(ತೃತೀಯ), ಸರ್ಕಾರಿ ಪ್ರೌಢಶಾಲೆ ವಿಭಾಗಕ್ಕೆ `ಜನಲೋಕಪಾಲ ಕಾಯ್ದೆಯಿಂದ ಮಾತ್ರ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ~ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ಶಿವಷಡಕ್ಷರದೇವ ವಿದ್ಯಾ ಸಂಸ್ಥೆಯ ಭುವನೇಶ್ವರಿ(ಪ್ರಥಮ), ಹಾಡ್ಲಿ ಅರುಣೋದಯ ಸಂಸ್ಥೆಯ ಎನ್.ಎಂ.ಮೋಹನ್‌ಕುಮಾರ್ (ದ್ವಿತೀಯ), ಕೋಡಿಪುರ ಸ.ಹಿ.ಪ್ರಾಥಮಿಕ ಶಾಲೆ ತೇಜಸ್ವಿನಿ (ತೃತೀಯ) ಸ್ಥಾನ ಪಡೆದಿದ್ದಾರೆ. ಪ್ರೌಢಶಾಲೆ ವಿಭಾಗದಲ್ಲಿ ಬಸವೇಶ್ವರ ಪ್ರೌಢಶಾಲೆಯ ಪ್ರಶಾಂತ್‌ಕುಮಾರ್(ಪ್ರಥಮ), ಯತ್ತಂಬಾಡಿ ಸರ್ಕಾರಿ ಪ್ರೌಢಶಾಲೆ ಧನಂಜಯ (ದ್ವಿತೀಯ, ಹಾಡ್ಲಿ ಸರ್ಕಾರಿ ಪ್ರೌಢಶಾಲೆಯ ಮಾದೇಶ್(ತೃತೀಯ).

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬಸವೇಶ್ವರ ಪ್ರೌಢಶಾಲೆ(ಪ್ರಥಮ), ಸರ್ಕಾರಿ ಪ್ರೌಢಶಾಲೆ(ದ್ವಿತೀಯ), ಪ್ರೌಢ ಶಾಲೆ ವಿಭಾಗದ ಚರ್ಚಾ ಸ್ಪರ್ಧೆಯಲ್ಲಿ ಹಾಡ್ಲಿ ಸರ್ಕಾರಿ ಪ್ರೌಢಶಾಲೆಯ ಮಹೇಶ್ವರಿ(ಪ್ರಥಮ), ನವ್ಯ(ದ್ವಿತೀಯ), ಬಸವೇಶ್ವರ ಪ್ರೌಢಶಾಲೆ(ತೃತೀಯ) ಬಹುಮಾನ ಪಡೆದಿದ್ದಾರೆ.

ಭಾವಗೀತೆ ಸ್ಪರ್ಧೆಯಲ್ಲಿ ಕೋಡಿಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಅರ್ಪಿತಾ(ಪ್ರಥಮ), ಶಿವಕವಿಷಡಕ್ಷರ ವಿದ್ಯಾಸಂಸ್ಥೆಯ ಮಹೇಶ್ವರಿ(ದ್ವಿತೀಯ), ನಡಕಲಪುರ ಸರ್ಕಾರಿ ಶಾಲೆಯ ಹೇಮ(ತೃತೀಯ), ಪ್ರೌಢಶಾಲೆ ವಿಭಾಗದಲ್ಲಿ ಬಸವೇಶ್ವರ ಪ್ರೌಢ ಶಾಲೆಯ ಮಂಜುಳಾ(ಪ್ರಥಮ), ಹಾಡ್ಲಿ ಸರ್ಕಾರಿ ಪ್ರೌಢಶಾಲೆಯ ಜ್ಯೋತಿ (ದ್ವಿತೀಯ), ಹಲಸಹಳ್ಳಿ ಮೊರಾರ್ಜಿ ದೇಸಾಯಿ ಶಾಲೆಯ ಕಾರ್ತಿಕ್(ತೃತೀಯ) ಬಹುಮಾನ ಪಡೆದಿದ್ದಾರೆ.

ತೀರ್ಪುಗಾರರಾಗಿ ಶಾಂತಿ ಕಾಲೇಜಿನ ನಿವೃತ್ತ ಪ್ರೊ.ದೊಡ್ಡಲಿಂಗೇಗೌಡ, ಹನೂರು ಸಮೀಪದ ಶಾಗ್ಯ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್. ಎಂ.ನಾಗೇಂದ್ರಮೂರ್ತಿ ಕರ್ತವ್ಯ ನಿರ್ವಹಿಸಿದರು. ಇದೇ ಸಂದರ್ಭಧಲ್ಲಿ 2012ನೇ ಸಾಲಿನ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಲಾಯಿತು.

ಶಿವಕವಿ ಷಡಕ್ಷರದೇವ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಮುಮ್ಮಡಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು. ಧನಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾದಿಕ್‌ಪಾಷ, ಉಪಾದ್ಯಕ್ಷ ದೊಡ್ಡ ಸ್ವಾಮಿ, ಮುಖ್ಯಶಿಕ್ಷಕ ಚನ್ನವೀರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಕೃಷ್ಣೇಗೌಡ ಹುಸ್ಕೂರು, ಸಾಹಿತಿ ಬಸಪ್ಪನೆಲ್ಮಾಕನ ಹಳ್ಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.