ADVERTISEMENT

ಶ್ರೀ ಪದ್ಧತಿ ಅನುಸರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:15 IST
Last Updated 2 ಫೆಬ್ರುವರಿ 2011, 18:15 IST

ಕೃಷ್ಣರಾಜಪೇಟೆ: ಕಡಿಮೆ ಬಂಡವಾಳ ಮತ್ತು ಶ್ರಮದೊಂದಿಗೆ ಹೆಚ್ಚಿನ ಲಾಭ ಗಳಿಸುವ ನಿಟ್ಟಿನಲ್ಲಿ  ರೈತರು ಯೋಚಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸಂಗಯ್ಯ ಬುಧವಾರ ಸಲಹೆ ನೀಡಿದರು.
ನಬಾರ್ಡ್, ಕೃಷಿ ಇಲಾಖೆ, ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ  ನಾಯಕನಹಳ್ಳಿಯಲ್ಲಿ ಏರ್ಪಡಿಸಿದ್ದ ಶ್ರೀ ಪದ್ಧತಿ ಬತ್ತದ ಬೇಸಾಯದ ಕುರಿತ ಸಾಮರ್ಥ್ಯಾಭಿವೃದ್ಧಿ  ತರಬೇತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾರಂಪರಿಕ ಬೇಸಾಯ ಪದ್ಧತಿ ಶ್ರಮದಾಯಕ ಮತ್ತು ಆರ್ಥಿಕ ಹೊರೆ ಉಂಟುಮಾಡುತ್ತಿದೆ. ಈ   ಹಿನ್ನೆಲೆಯಲ್ಲಿ ನೂತನ ವ್ಯವಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ರೈತರು ಉತ್ತಮ ಇಳುವರಿ  ಪಡೆಯಬಹುದು. ಕಡಿಮೆ ನೀರು, ಕಡಿಮೆ ಶ್ರಮದ ವಿನಿಯೋಗವಾಗುವ ಶ್ರೀ ಪದ್ಧತಿಯಲ್ಲಿ ಬತ್ತ ಬೆಳೆಯಲು ಒಲವು ತೋರಬೇಕು ಎಂದು ಹೇಳಿದರು.

ನಬಾರ್ಡ್‌ನ ಜಿಲ್ಲಾ ಉಪ ಮಹಾ ಪ್ರಬಂಧಕ ಬಿಂದುಮಾಧವ ಒಡವಿ ಮಾತನಾಡಿದರು.ಸಂತೇಬಾಚಹಳ್ಳಿ ಗ್ರಾ.ಪಂ. ಅಧ್ಯಕ್ಷ ಕುಮಾರ್, ರಂಗನಾಥಪುರ ಕ್ರಾಸ್ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ,  ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ಜಯಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ರವೀಂದ್ರ, ಮಂಡ್ಯದ ವಿ.ಸಿ. ಫಾರಂನ ವಿಜ್ಞಾನಿ ಸಯ್ಯದ್ ಅನ್ವರುಲ್ಲಾ, ಪ್ರಗತಿಪರ ರೈತರಾದ ಬಿ.ನಂಜಪ್ಪ, ಜಯರಾಮೇಗೌಡ ಇದ್ದರು.
ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಬಿ.ರಾಮಕೃಷ್ಣ ಸ್ವಾಗತಿಸಿದರು. ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ಚಂದ್ರ ಗುರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.