ADVERTISEMENT

ಹೇಮಾವತಿ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 11:10 IST
Last Updated 11 ಫೆಬ್ರುವರಿ 2011, 11:10 IST

ಮಂಡ್ಯ: ಹೇಮಾವತಿ ಜಲಾಶಯದಿಂದ ಬೇಸಿಗೆ ಬೆಳೆಗೆ ಕಟ್ಟು ನೀರು ಪದ್ಧತಿಯಲ್ಲಿ ಬೇಸಿಗೆ ಬೆಳೆಗಾಗಿ ಗುರುವಾರದಿಂದ ನೀರು ಬಿಡುಗಡೆ ಮಾಡಲಾಗಿದೆ.ಬೇಸಿಗೆ ಬೆಳೆಗಳಿಗೆ ಹೇಮಾವತಿ ಎಡದಂಡೆ ನಾಲೆ ಆರಂಭದಿಂದ 151ನೇ ಕಿ.ಮೀ.ವರೆಗೆ, ಹೇಮಾವತಿ ಬಲದಂಡೆ ನಾಲೆ ಪ್ರಾರಂಭದಿಂದ 91 ಕಿ.ಮೀ.ವರೆಗೆ ಚಂಗರವಳ್ಳಿ ಕಾಲುವೆ, ಹೇಮಗಿರಿ ನಾಲೆ, ಅಕ್ಕಿಹೆಬ್ಬಾಳು ನಾಲೆ, ಮುಂದಗೆರೆ ಎಡದಂಡೆ ನಾಲೆ ಮತ್ತು ಮಂದಗೆರೆ ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯ ಈ ಕುರಿತು ನಿರ್ಧಾರ ಕೈಗೊಂಡಿದ್ದು, ಆಧುನೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಶ್ರೀರಾಮದೇವರ ದಕ್ಷಿಣ ನಾಲೆ ಮತ್ತು ಉತ್ತರ ನಾಲೆಗಳಿಗೆ ನೀರು ಹರಿಸಲಾಗುವುದಿಲ್ಲ. ನೀರಿನ ನಿಯಂತ್ರಣವನ್ನು ಹಾಲಿ ಸಂಗ್ರಹ ಮತ್ತು ಮಳೆ ಆಧರಿಸಿ ಬರುವ ನೀರಿನ ಅಂದಾಜಿನ ಮೇಲೆ ಮಾಡಲಾಗಿದೆ ಎಂದು ಗೊರೂರು ಹೇಮಾವತಿ ಜಲಾಶಯದ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.