ADVERTISEMENT

ಹೋಮಕ್ಕೆ ಸಿದ್ಧತೆ, ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 10:15 IST
Last Updated 14 ಆಗಸ್ಟ್ 2012, 10:15 IST
ಹೋಮಕ್ಕೆ ಸಿದ್ಧತೆ, ಅದ್ದೂರಿ ಮೆರವಣಿಗೆ
ಹೋಮಕ್ಕೆ ಸಿದ್ಧತೆ, ಅದ್ದೂರಿ ಮೆರವಣಿಗೆ   

ಮಂಡ್ಯ: ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆರೋಗ್ಯ ವೃದ್ಧಿಗಾಗಿ ಸ್ವಾಭಿಮಾನಿ ಒಕ್ಕಲಿಗರ ಸೇವಾ ಟ್ರಸ್ಟ್ ಏರ್ಪಡಿಸಿರುವ `ಮೃತ್ಯುಂಜಯ ಹೋಮ~ ಪ್ರಯುಕ್ತ ಕಲಾತಂಡಗಳು, ಉತ್ಸವಮೂರ್ತಿಗಳ ಮೆರವಣಿಗೆಯನ್ನು ಸೋಮವಾರ ನಗರದಲ್ಲಿ ನಡೆಸಲಾಯಿತು.

ಕಾಳಿಕಾಂಭ ದೇವಸ್ಥಾನದಿಂದ ಸರ್ಕಾರಿ ಮಹಾ ವಿದ್ಯಾಲಯದವರೆಗೂ ಅದ್ಧೂರಿ ಮೆರವಣಿಗೆ ನಡೆಯಿತು. ಎತ್ತಿನಗಾಡಿಗಳಲ್ಲಿ ಕಾವೇರಿ ಮಾತೆ, ನಾಲ್ವಡಿ ಕೃಷ್ಣರಾಜ ಒಡೆಯರ್,ಸರ್ ಎಂ.ವಿಶ್ವೇಶ್ವರಯ್ಯ, ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ಹಲವರ ಭಾವಚಿತ್ರಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ವಿವಿಧ ಜಾನಪದ ಕಲಾತಂಡಗಳು, ದೇವರ ಉತ್ಸವಮುರ್ತಿಗಳು, ಚಿಕ್ಕರಸಿನಕೆರೆ ಬಸವ, ಅಡ್ಡ ಪಲ್ಲಕ್ಕಿ ಇತ್ಯಾದಿಗಳ ಮೆರವಣಿಗೆಗೆ ಮಂಗಳವಾದ್ಯಗಳ ಹಿಮ್ಮೇಳವೂ ಇತ್ತು.

ಅಚ್ಚುಕಟ್ಟು ಸಿದ್ಧತೆ: ನಗರದ ಸರ್ಕಾರಿ ಮಹಾ ವಿದ್ಯಾಲಯ ಆವರಣದಲ್ಲಿ `ಮೃತ್ಯುಂಜಯ ಹೋಮ~ಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಕುಡಿಯವ ನೀರು, ಊಟಕ್ಕೆ ಪ್ರತ್ಯೇಕ ಕೌಂಟರ್ ತೆರಯಲಾಗಿದೆ.

ಬೆಳಿಗ್ಗೆ 6.5ರಿಂದ ಮಧ್ಯಾಹ್ನ 12.25ರ ವರೆಗೆ ಹೋಮ ನಡೆಯಲಿದೆ. ನಂತರ ಗುರುವಂದನಾ ಕಾರ್ಯಕ್ರಮ ಜರುಗಲಿದ್ದು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ ಸೇರಿದಂತೆ ಹಲವು ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.