ಸಂತೇಬಾಚಹಳ್ಳಿ: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ 12 ಮಂದಿ ಗೆಲುವು ಭಾನುವಾರ ನಡೆದ ಚುನಾವಣೆಯಲ್ಲಿ ಸಾಧಿಸಿದರು.
‘ಸಾಮಾನ್ಯ ಕ್ಷೇತ್ರದಿಂದ ಎಂ.ಪುನೀತ, ಎಚ್.ಎಂ.ಗೋಪಾಲ, ದಶರಥ, ಮಂಜೇಗೌಡ, ಮಹದೇವಪ್ಪ, ಮಹಿಳಾ ಮೀಸಲಾತಿಯಿಂದ ಛಾಯಾ, ಲಕ್ಷ್ಮಿ, ಪ್ರವರ್ಗ ‘ಎ’ಯಿಂದ ಹರೀಶ್, ಪ್ರವರ್ಗ ‘ಬಿ’ಯಿಂದ ಬಿ.ಮೋಹನ್, ಪರಿಶಿಷ್ಟ ಜಾತಿ ಸುರೇಶ್, ಪರಿಶಿಷ್ಟ ಪಂಗಡದಿಂದ ಕುಮಾರ್ ಗೆಲುವು ಸಾಧಿಸಿದ್ದಾರೆ’ ಎಂದು ಚುನಾವಣಾಧಿಕಾರಿ ಆನಂದ ನಾಯಕ್ ಘೋಷಣೆ ಮಾಡಿದರು.
ಮನ್‌ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ‘ಸಹಕಾರ ಸಂಘದಲ್ಲಿ ರಾಜಕೀಯ ಮಾಡಬಾರದು. ಷೇರು ಪಡೆದವರಿಗೆ ಸವಲತ್ತು ನೀಡಬೇಕು. ಎಲ್ಲಾ ಹಳ್ಳಿಗಳ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದರು.
ಮುಖಂಡರಾದ ಹುಬ್ಬನಹಳ್ಳಿ ಕುಮಾರ್, ಎಲ್‌ಐಸಿ ಮೊಗಣ್ಣ, ಕೃಷ್ಣ, ಸೋಮಶೇಖರ್, ನಿರ್ದೇಶಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.