ADVERTISEMENT

ಸಾಸಲು ದೇಗುಲದ ಹುಂಡಿಯಲ್ಲಿ ₹5.10 ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 22 ಮೇ 2025, 14:22 IST
Last Updated 22 ಮೇ 2025, 14:22 IST
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ಹುಂಡಿ ಎಣಿಕೆ ಗುರುವಾರ ನಡೆಯಿತು
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ಹುಂಡಿ ಎಣಿಕೆ ಗುರುವಾರ ನಡೆಯಿತು   

ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದ ಮುಜರಾಯಿ ಇಲಾಖೆಯ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲಗಳ ಹುಂಡಿ ಎಣಿಕೆ ನಡೆದಿದ್ದು, ₹ 5.10 ಲಕ್ಷ ಸಂಗ್ರಹವಾಗಿದೆ.

ಮುಜರಾಯಿ ಅಧಿಕಾರಿ ತಹಶೀಲ್ದಾರ್ ಅಶೋಕ್ ಮಾರ್ಗದರ್ಶನದಲ್ಲಿ ಉಪ ತಹಶೀಲ್ದಾರ್ ವೀಣಾ ನೇತೃತ್ವದಲ್ಲಿ ಗುರುವಾರ ಎಣಿಕೆ ಕಾರ್ಯ ನಡೆದಿದ್ದು, ಹಣದ ಜೊತೆಯಲ್ಲಿ ಕಣ್ಣು, ನಾಗರಸೆಡೆಯಂತಹ ಮತ್ತಿತರ ಆಕೃತಿಯ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದರು.

ಒಟ್ಟು 16 ಹುಂಡಿಗಳನ್ನು ಕಂದಾಯ ಇಲಾಖೆಯವರು ಬೆಳಿಗ್ಗೆಯಿಂದ ಸಂಜೆಯವರೆಗೆ ಎಣಿಕೆ ಕಾರ್ಯ ನಡೆಯಿತು.

ADVERTISEMENT

ರಾಜಸ್ವ ನಿರೀಕ್ಷಕ ಡಿ.ಆರ್. ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಬಿ.ಎಂ. ಪ್ರಸನ್ನ, ಸೋಮಾಚಾರ್, ತಿಪ್ಪೇಶ್, ಸುನೀಲ್‌ ಗಾಣಿಗೇರ್, ಹರ್ಷಿತಾ, ವನಜಾಕ್ಷಿ, ಲಕ್ಷ್ಮೀ, ಮುಜರಾಯಿ ಸಹಾಯಕಿ ಪೂರ್ಣಿಮಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.