ADVERTISEMENT

₹ 3.15ಕೋಟಿ ಆದಾಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 6:44 IST
Last Updated 1 ಫೆಬ್ರುವರಿ 2018, 6:44 IST

ಮದ್ದೂರು: ‘ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಯ 2018-19ನೇ ಸಾಲಿಗೆ ಅಂದಾಜು ₹ 3.15ಕೋಟಿ ಆದಾಯ ನಿರೀಕ್ಷಿಸಿಲಾಗಿದೆ’ ಎಂದು ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಗೇಶ್‌ ತಿಳಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆಯವ್ಯಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ನಿರೀಕ್ಷಿತ ಆದಾಯದಲ್ಲಿ ಮಾರುಕಟ್ಟೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಮಾರುಕಟ್ಟೆ ಮುಂಭಾಗದಲ್ಲಿ ಮೈಸೂರು–ಬೆಂಗಳೂರು ರಸ್ತೆಯಲ್ಲಿ ವಾಹನ ದಟ್ಟಣೆಯಾಗಿ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಕಾರಣ ಮುಖ್ಯ ಹರಾಜು ಕಟ್ಟೆಗಳನ್ನು ನೆಲಸಮ ಮಾಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡರು.

ಕೃಷಿ ಚಟುವಟಿಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೃತಪಟ್ಟಿದ್ದ ಎ.ಎನ್.ಚಂದನ್, ಪಟ್ಟಣದ ಎಂ.ಮಾಧು ಅವರ ಕುಟುಂಬವರ್ಗದವರಿಗೆ ತಲಾ ₹ 1ಲಕ್ಷ ಪರಿಹಾರ ಧನದ ಚೆಕ್‌ ವಿತರಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಮಮತಾ ಶಂಕರೇಗೌಡ, ಸದಸ್ಯರಾದ ಅಜ್ಜಹಳ್ಳಿರಾಮಕೃಷ್ಣ, ಎಸ್.ಎನ್.ಕೃಷ್ಣ, ಎಂ.ಇ.ಮಹೇಂದ್ರ, ಕೆ.ಬಿ.ರವಿಕುಮಾರ್, ಜಿ.ಎಸ್.ಸಂದೀಪ್, ಜಿ.ರಾಜು, ಎಚ್.ಕೆ.ಕರಿಯಪ್ಪ, ಪಿ.ಸುಂದರ್, ವಿ.ಕೆ.ರಾಜು, ಎಂ.ಡಿ.ಪ್ರಕಾಶ್, ವಿ.ಕೆ.ಕವಿತಾ, ಪಾರ್ವತಮ್ಮ, ಕಾರ್ಯದರ್ಶಿ ಶ್ರೀಕಂಠಪ್ರಭು, ಸಹಾಯಕ ಕಾರ್ಯದರ್ಶಿ ಎನ್.ನಾಗೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.