ಭಾರತೀನಗರ ಸಮೀಪದ ಕಾರ್ಕಹಳ್ಳಿ ಬೋರೇಗೌಡ ಎಂಬುವವರ ಮೇಕೆಯು ಚಿರತೆ ದಾಳಿಯಿಂದ ಮೃತಪಟ್ಟಿರುವುದು
ಭಾರತೀನಗರ: ಸಮೀಪದ ಕಾರ್ಕಹಳ್ಳಿ ಗ್ರಾಮದಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆ 3 ಮೇಕೆಗಳನ್ನು ಹೊತ್ತೊಯ್ದಿದೆ.
ಗ್ರಾಮದ ಬೋರೇಗೌಡ ಎಂಬುವವರ ಮನೆ ಬಳಿಯ ಮೇಕೆ ಕೊಪ್ಪಲಿನೊಳಗೆ ನುಗ್ಗಿದ ಚಿರತೆ ಮೇಕೆಯೊಂದನ್ನು ಹಿಡಿದು ತಿನ್ನುತ್ತಿದ್ದು, ಮನೆಯವರು ಮನೆಯಿಂದ ಹೊರಗೆ ಬಂದು ನೋಡಲಾಗಿ ಮೇಕೆ ಅರಚಿಕೊಳ್ಳುತ್ತಿದ್ದವು.
ಸ್ವಲ್ಪ ಸಮಯ ಬಿಟ್ಟು ಮತ್ತೆ ಬಂದ ಚಿರತೆ ಮತ್ತೊಂದು ಮೇಕೆಯನ್ನು ಮಾಲೀಕರ ಕಣ್ಣೆದುರಿಗೇ ಹೊತೊಯ್ದಿದ್ದು, ಮುಂಜಾನೆ 3 ಗಂಟೆ ವೇಳೆಗೆ ಚಿರತೆ ಮತ್ತೊಂದು ಮೇಕೆಯನ್ನು ಹೊತ್ತೊಯ್ಯಲು ಪ್ರಯತ್ನಿಸಿದೆ. ಸ್ಥಳಿಯರ ಸಹಕಾರದಿಂದ ಚಿರತೆಯನ್ನು ಓಡಿಸಲು ಪ್ರಯತ್ನ ಪಟ್ಟರು. ಆ ವೇಳೆಗಾಗಲೇ ಚಿರತೆ ಮೇಕೆಯನ್ನು ಕೊಂದು ಓಡಿ ಹೋಯಿತೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಹೆಚ್ಚಾಗಿ ವಲಸೆ ಬಂದಿರುವ ಚಿರತೆಗಳು: ಇಲ್ಲಿಯ ಅಣ್ಣೂರು ಗ್ರಾಮಕ್ಕೆ 6 ಕ್ಕಿಂತಲೂ ಹೆಚ್ಚು ಚಿರತೆಗಳು ವಲಸೆ ಬಂದಿದ್ದು, ಆಹಾರಕ್ಕಾಗಿ ಸಮೀಪದ ಮೆಣಸಗೆರೆ, ಕಾರ್ಕಹಳ್ಳಿ, ಬಸವೇಶ್ವರನಗರದಲ್ಲಿ ಮೇಕೆಗಳು, ನಾಯಿಗಳನ್ನು ಹಿಡಿದು ಕೊಂದು ಹಾಕಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ಗಮನಹರಿಸದಿದ್ದು, ಜನರು ಹೊಲ, ಗದ್ದೆಗಳಿಗೆ ಹೋಗಲು ಹೆದರುವಂತಾಗಿದೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನು ಸೆರೆಹಿಡಿಯಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.