ADVERTISEMENT

‘ಆಳಿದ ಮಾಸ್ವಾಮಿಗಳು’ ನಾಟಕ ಆ.3ರಂದು

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 14:15 IST
Last Updated 31 ಜುಲೈ 2025, 14:15 IST
ನಾಲ್ವಡಿ ಕೃಷ್ಣರಾಜ ಒಡೆಯರ್‌
ನಾಲ್ವಡಿ ಕೃಷ್ಣರಾಜ ಒಡೆಯರ್‌   

ಮಂಡ್ಯ: ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ವತಿಯಿಂದ ‘ಕನ್ನಂಬಾಡಿ ಉಳಿಸಿ ಅಭಿಯಾನ’ ಘೋಷಣೆಯೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜೀವನಾಧಾರಿತ ಕುರಿತಂತೆ ‘ಆಳಿದ ಮಾಸ್ವಾಮಿಗಳು’ ನಾಟಕ ಪ್ರದರ್ಶನವು ಆ.3ರಂದು ಸಂಜೆ 6 ಗಂಟೆಗೆ ನಗರದ ಪಿಇಎಸ್‌ ಕಾಲೇಜು ಆವರಣದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ದಿನೇಶ್‌ ಚಮ್ಮಾಳಿಗೆ (ನೀನಾಸಂ) ಅವರ ವಸ್ತ್ರವಿನ್ಯಾಸ ಮತ್ತು ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ನಾಲ್ವಡಿ ಅವರು ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿಸಿ, ಕಾಲುವೆಗಳನ್ನು ತೋಡಿಸಿ, ಸೇತುವೆ ತೂಬುಗಳನ್ನು ನಿರ್ಮಿಸಿ ಕೃಷಿಗೆ ಆದ್ಯತೆ ನೀಡಿದ ಅನ್ನದಾತರು. ಮೈಸೂರು ಸಕ್ಕರೆ ಕಾರ್ಖಾನೆ, ವಿ.ಸಿ.ಫಾರಂ ಸ್ಥಾಪಿಸಿ ಮಂಡ್ಯದ ಆರ್ಥಿಕ ಪ್ರಗತಿಗೆ ಕಾರಣರಾದವರು. 

ನಾಡಿನ ಜನತೆ ಮರೆಯಲಾಗದ ಮಹಾನುಭಾವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, 1940ರಲ್ಲಿ ನಮ್ಮನ್ನು ಅಗಲಿದ ನಾಡದೊರೆ ನಾಲ್ವಡಿಯವರನ್ನು ನೆನೆಯುವ ಮೂಲಕ ಶ್ರದ್ಧಾಂಜಲಿ ಸಲ್ಲಿಸೋಣ. ಅವರ ನೆನಪಿಗಾಗಿ ಈ ನಾಟಕ ಪ್ರದರ್ಶನ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಮುಖಂಡರಾದ ಸುನಂದಾ ಜಯರಾಂ ಮತ್ತು ಕೆ.ಬೋರಯ್ಯ ಪ್ರಕಟಣೆ ಕೋರಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.