ಸಂತೇಬಾಚಹಳ್ಳಿ: ಶಾಲಾ ಆರಂಭದ ಪ್ರಯುಕ್ತ ಎಸ್‌ಡಿಎಂಸಿ ಸದಸ್ಯರು ಶಾಲೆಗಳಲ್ಲಿ ಆರತಿ ಬೆಳಗಿ, ಹೂವು ನೀಡಿ ಮಕ್ಕಳನ್ನು ಸ್ವಾಗತಿಸಿದರು.
ಸಂತೇಬಾಚಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹರುಪನಹಳ್ಳಿ, ಗೊರವಿ, ಆಚಮನಹಳ್ಳಿ, ಅಮಚಹಳ್ಳಿ, ಭಾರತೀಪುರ, ಜಾಗಿನಕೆರೆ, ಸೇರಿ ಹೋಬಳಿಯ ಬಹುತೇಕ ಶಾಲೆಯಲ್ಲಿ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಶಾಲೆಯ ಆವರಣ ಸ್ವಚ್ಛತೆ ಮಾಡಿ ಮಕ್ಕಳಿಗೆ ಸ್ವಾಗತಿಸಿದರು.
ಸಂತೇಬಾಚಹಳ್ಳಿ ಶಿಕ್ಷಕ ಸತೀಶ್ ಮಾತನಾಡಿ, ‘ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1ರಿಂದ 6ನೇ ತರಗತಿಯವರೆಗೆ ಇರುವ ಏಕೈಕ ಆಂಗ್ಲ ಮಾಧ್ಯಮ ಶಾಲೆಯಾಗಿದೆ. ಆದ್ದರಿಂದ ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಶಿಕ್ಷಕರೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತೇವೆ. ಸರ್ಕಾರದಿಂದ ನೀಡುವ ಸವಲತ್ತುಗಳನ್ನು ನೀಡುತ್ತೇವೆ. ಉಚಿತವಾಗಿ ಪಟ್ಟಿಗೆ ಪುಸ್ತಕ ಹಾಗೂ ಸಮವಸ್ತ್ರಗಳನ್ನು ನೀಡುತ್ತಿದ್ದೇವೆ’ ಎಂದರು.
ಇಸಿಒ ಕೃಷ್ಣನಾಯಕ್, ಸಿಆರ್‌ಪಿ ಮಹೇಶ್, ಮಲ್ಲೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಮುಖ್ಯ ಶಿಕ್ಷಕ ಸತೀಶ್, ರಮೇಶ್, ಮಂಜುಳಾ, ಮಂಜುನಾಥ್, ಮಂಜು,ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.