ಸಂತೇಬಾಚಹಳ್ಳಿ: ಹೋಬಳಿಯ ಕೊಟಗಹಳ್ಳಿಗೆ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಅವರು ಶುಕ್ರವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
‘ಸರಿಯಾದ ಸಮಯಕ್ಕೆ ರೈತರು ಕಂದಾಯ ಪಾವತಿ ಮಾಡಬೇಕು. ರೈತರ ಜಮೀನು ಬೀಳು ಜಮೀನಾಗಿ ಪರಿವರ್ತನೆ ಆಗಿರುವುದು ಕಂಡು ಬಂದಿದೆ. ತಮ್ಮ ಜಮೀನು ದಾಖಲೆ ಸರಿಪಡಿಸಿಕೊಳ್ಳಬೇಕು. ಪೌತಿ ಖಾತೆ ಮಾಡಲು ಯಾವ ಅಧಿಕಾರಿಗಳಿಗೂ ಹಣ ನೀಡಬೇಡಿ. ಬಡವರಿಗೆ ಪಿಂಚಣಿ ಹಾಗೂ ವಿಧವಾ ವೇತನ ಮಾಡಿಸಿಕೊಳ್ಳಲು ನೇರವಾಗಿ ತಹಶೀಲ್ದಾರ್ ಅಥವಾ ಉಪ ತಹಶೀಲ್ದಾರ್ ಅವರನ್ನು ಭೇಟಿ ಮಾಡಬೇಕು. ನೇರವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಕು’ ಎಂದರು.
‘ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಿಕರು ಕೆಲಸದ ಕೇಂದ್ರ ಸ್ಥಾನದಲ್ಲಿರಬೇಕು. ರೈತರು ಯಾವುದೇ ಮಾಹಿತಿ ಬೇಕಿದ್ದರೂ ನೇರವಾಗಿ ಮಿನಿವಿಧಾನಸೌಧಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಹೇಳಿದರು.
‘ಪಿಂಚಣಿ, ಪೌತಿ ಖಾತೆ ತುರ್ತಾಗಿ ಪೂರ್ಣಗೊಳಿಸಬೇಕು’ ಎಂದು ಗ್ರಾಮ ಲೆಕ್ಕಾಧಿಕಾರಿ ಭಾರತಿ ಅವರಿಗೆ ಸಲಹೆ ನೀಡಿದರು.
ಗ್ರಾಮ ಲೆಕ್ಕಾಧಿಕಾರಿ ಭಾರತಿ, ಗ್ರಾಮ ಪಂಚಾಯಿತಿ ಸದಸ್ಯ ಮಂಜೇಗೌಡ, ಉಗ್ರೇಗೌಡ, ಧನಂಜಯ, ಜಯರಾಮ್, ಮಂಜುಳಮ್ಮ, ಪುಷ್ಪಾ, ನಾರಾಯಣಗೌಡ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.