
ಶ್ರೀರಂಗಪಟ್ಟಣ: ತಾಲ್ಲೂಕಿನ ಕಡತನಾಳು ಗ್ರಾಮದಲ್ಲಿ ಬೆಂಕಿ ಆಕಸ್ಮಿಕದಿಂದ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸುಟ್ಟು ಹೋಗಿದೆ.
ಗ್ರಾಮದ ಶಿವಣ್ಣ ಅವರ ಎರಡು ಎಕರೆ ಹಾಗೂ ಡಾಮಡಹಳ್ಳಿಯ ಅಂದಾನಯ್ಯ ಅವರ ಒಂದು ಎಕರೆಯಷ್ಟು ಕಬ್ಬು ಬೆಳೆ ಸುಟ್ಟು ಹೋಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಆದರೂ. ಶೇ 90ರಷ್ಟು ಬೆಳೆ ಸುಟ್ಟು ಹೋಗಿದೆ. ಬೆಂಕಿಯ ಕೆನ್ನಾಲಿಗೆಗೆ 20ಕ್ಕೂ ಹೆಚ್ಚು ತೆಂಗಿನ ಸಸಿಗಳು ಸುಟ್ಟಿವೆ.
‘ಪಕ್ಕದ ಕಲ್ಲು ಕ್ವಾರಿಯಲ್ಲಿ ತುಂಬಿದ್ದ ನೀರು ಬಳಸಿ ಕಬ್ಬು ಬೆಳೆ ಉಳಿಸಿಕೊಂಡಿದ್ದೆ. ಆದರೆ 6 ತಿಂಗಳ ಕಬ್ಬು ಸುಟ್ಟು ಹೋಗಿದೆ. ₹2 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ’ ಎಂದು ರೈತ ಶಿವಣ್ಣ ಹೇಳಿದರು.
ಪರಿಹಾರ ಇಲ್ಲ: ಇಲ್ಲಿಯ ವರೆಗೆ ಬೆಂಕಿ ಆಕಸ್ಮಿಕದಿಂದ ಕಬ್ಬು ಬೆಳೆ ಸುಟ್ಟು ಹೋದ ಪ್ರಕರಣಗಳಲ್ಲಿ ಸರ್ಕಾರದಿಂದ ಪರಿಹಾರ ನೀಡಿಲ್ಲ. ಆದರೂ ಸಂತ್ರಸ್ತ ರೈತರಿಂದ ಅರ್ಜಿ ಪಡೆದು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಕಂದಾಯ ನಿರೀಕ್ಷಕ ಭಾಸ್ಕರ್ ‘ಪ್ರಜಾವಾಣಿ‘ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.