ADVERTISEMENT

ಸಂತೇಬಾಚಹಳ್ಳಿ: ನಿತ್ಯ ಯೋಗಾಭ್ಯಾಸ ಮಾಡಲು ಮಕ್ಕಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 13:38 IST
Last Updated 2 ಜುಲೈ 2025, 13:38 IST
ಸಂತೇಬಾಚಹಳ್ಳಿ ಹೋಬಳಿಯ ಆಚಮನಹಳ್ಳಿ ಪಾಂಚಜನ್ಯ ಪಬ್ಲಿಕ್ ಶಾಲೆಯ ಆವರಣದಲ್ಲಿ ನೂರಾರು ಮಕ್ಕಳು ಯೋಗಾಭ್ಯಾಸ ಮಾಡಿದರು
ಸಂತೇಬಾಚಹಳ್ಳಿ ಹೋಬಳಿಯ ಆಚಮನಹಳ್ಳಿ ಪಾಂಚಜನ್ಯ ಪಬ್ಲಿಕ್ ಶಾಲೆಯ ಆವರಣದಲ್ಲಿ ನೂರಾರು ಮಕ್ಕಳು ಯೋಗಾಭ್ಯಾಸ ಮಾಡಿದರು   

ಸಂತೇಬಾಚಹಳ್ಳಿ: ಪ್ರತಿನಿತ್ಯ ಯೋಗ ಮಾಡುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಾಂಚಜನ್ಯ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕಿ ಅಕ್ಷತಾ ಕುಮಾರಿ ಹೇಳಿದರು.

ಸಂತೇಬಾಚಹಳ್ಳಿ ಹೋಬಳಿಯ ಆಚಮನಹಳ್ಳಿ ಪಾಂಚಜನ್ಯ ಪಬ್ಲಿಕ್ ಶಾಲೆಯ ಆವರಣದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಯೋಗದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಶಾಲೆಯಲ್ಲಿ ಯೋಗ ಕಲಿಸಲು ದೈಹಿಕ ಶಿಕ್ಷಣ ಶಿಕ್ಷಕರನ್ನು ಒದಗಿಸಲಾಗಿದೆ. ಮಕ್ಕಳು ಯೋಗ ಕಲಿಯಬೇಕು. ಯೋಗದಲ್ಲಿ ಸಾಧನೆ ಮಾಡಬಹುದು. ಯೋಗ ಮಾಡುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬಹುದು. ಯೋಗದಿಂದ ರೋಗ ಮುಕ್ತ ಸಮಾಜ ನಿರ್ಮಾಣವು ಸಾಧ್ಯ. ಮಕ್ಕಳು ಹಾಗೂ ಪೋಷಕರು ಆರೋಗ್ಯಕ್ಕಾಗಿ ಪ್ರತಿನಿತ್ಯ ಯೋಗ ಮಾಡಬೇಕು ಎಂದರು.

ADVERTISEMENT

ಶಿಕ್ಷಕರಾದ ಕೆ.ಸಿ.ಸತೀಶ್, ಡಿ.ಕೆ. ಸತೀಶ್, ಸಂದೇಶ್, ಸಂತೋಷ್, ಚಂದ್ರಶೇಖರ, ಭವ್ಯ, ಸೌಮ್ಯ, ಗೌರಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.