ADVERTISEMENT

ಕಿಕ್ಕೇರಿ: ಮದ್ಯವ್ಯಸನಿಗಳು ನವಜೀವನಕ್ಕೆ ಕಾಲಿಟ್ಟರು..

2015ನೇ ಮದ್ಯವರ್ಜನ ಶಿಬಿರದಲ್ಲಿ ಕುಟುಂಬಸ್ಥರ ಆನಂದಭಾಷ್ಪ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 3:00 IST
Last Updated 5 ಡಿಸೆಂಬರ್ 2025, 3:00 IST
ಕಿಕ್ಕೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗುರುವಾರ ಜರುಗಿದ ಮಧ್ಯವರ್ಜನೆ ಶಿಬಿರದಲ್ಲಿ ಸ್ವತಂತ್ರಚನ್ನವೀರಸ್ವಾಮೀಜಿ ಶುಭಾಶೀರ್ವಚನ ನುಡಿಯಾಡಿದರು. ಆರ್‌ಟಿಒ ಮಲ್ಲಿಕಾರ್ಜುನ, ಸುರೇಶ್, ಯೋಗೇಶ್, ಮಂಜು, ಪ್ರಸಾದ್, ನಳಿನಿ ಭಾಗವಹಿಸಿದ್ದರು
ಕಿಕ್ಕೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಗುರುವಾರ ಜರುಗಿದ ಮಧ್ಯವರ್ಜನೆ ಶಿಬಿರದಲ್ಲಿ ಸ್ವತಂತ್ರಚನ್ನವೀರಸ್ವಾಮೀಜಿ ಶುಭಾಶೀರ್ವಚನ ನುಡಿಯಾಡಿದರು. ಆರ್‌ಟಿಒ ಮಲ್ಲಿಕಾರ್ಜುನ, ಸುರೇಶ್, ಯೋಗೇಶ್, ಮಂಜು, ಪ್ರಸಾದ್, ನಳಿನಿ ಭಾಗವಹಿಸಿದ್ದರು   

ಕಿಕ್ಕೇರಿ: ಪಂಚಪಿಡುಗುಗಳಲ್ಲಿ ಒಂದಾದ ಕುಡಿತದಂತಹ ದುಶ್ಚಟ ಬಿಟ್ಟು ನವಜೀವನಕ್ಕೆ ಕಾಲಿಟ್ಟ ಮದ್ಯವ್ಯಸನಿಗಳ ಕುಟುಂಬದಲ್ಲಿ ಮಿಡಿದ ಆನಂದಭಾಷ್ಪ ಮರೆಯಲಾರದ ಕ್ಷಣವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜ್ಞಾನವಿಕಾಸ ಕೇಂದ್ರ ಮತ್ತಿತರ ಸಂಸ್ಥೆ ಸಹಕಾರದಲ್ಲಿ ಗುರುವಾರ ಏರ್ಪಡಿಸಿದ್ದ 2015ನೇ ಮದ್ಯವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು.

‘ಅತೀ ಹೆಚ್ಚು ಅಪಘಾತ, ದುರ್ಮರಣಗಳು ಕುಡಿದು ವಾಹನ ಚಲಾಯಿಸುವುದರಿಂದ ಆಗಿದೆ. ಸ್ವಾರ್ಥಕ್ಕೆ ಯುವ ಸಮೂಹವನ್ನು ದುಶ್ಚಟದಂತಹ ತಪ್ಪುದಾರಿಗೆ ಸೆಳೆಯಬಾರದು. ಆರೋಗ್ಯಕರ ಆಲೋಚನೆ, ಯೋಜನೆಗಳನ್ನು ಸಂಭಾವಿತರು ರೂಪಿಸಿದರೆ ಇಡೀ ಸಮಾಜ ಉತ್ತಮವಾಗಲಿದೆ’ ಎಂದು ಹೇಳಿದರು.

ADVERTISEMENT

ಕಾಪನಹಳ್ಳಿ ಗವಿಮಠ ಪೀಠಾಧ್ಯಕ್ಷ ಸ್ವತಂತ್ರ ಚನ್ನವೀರ ಸ್ವಾಮೀಜಿ ಆಶೀರ್ವಚನ ನೀಡಿ, ‘ಮದ್ಯಪಾನ ಆರಂಭದಲ್ಲಿ ಷೋಕಿಗಾಗಿ ಆರಂಭವಾಗಿ ಕುಟುಂಬ ಬೀದಿಗೆ ಇಳಿಸಿ ಸಾವಿನಲ್ಲಿ ಅಂತ್ಯಗೊಳಿಸಲಿದೆ. ಅನೈತಿಕ, ಸಮಾಜಘಾತುಕ ಶಕ್ತಿಗೆ ಪ್ರೇರೇಪಿಸುವ ಇಂತಹ ದುಶ್ಚಟದಿಂದ ದೂರವಿರಿ’ ಎಂದು ನುಡಿದರು.

‘ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಒಂದೆಡೆ ಸರ್ಕಾರಿ ಶಾಲೆ ಮುಚ್ಚುತ್ತಿದ್ದರೆ, ಮತ್ತೊಂದೆಡೆ ಎಣ್ಣೆ ಅಂಗಡಿಗಳು ಹೆಚ್ಚುತ್ತಿರುವುದು ದೂರದೃಷ್ಟಕರ’ ಎಂದು ಬೇಸರಿಸಿದರು.

ಯೋಜನೆ ಜಿಲ್ಲಾ ನಿರ್ದೇಶಕ ಎ. ಯೋಗೇಶ್ ಮಾತನಾಡಿ, ಮದ್ಯವರ್ಜಿಸಿ ನವಜೀವನಕ್ಕೆ ಕಾಲಿಟ್ಟ ಸದಸ್ಯರಿಗೆ ಸ್ವಾವಲಂಬಿಗಳಾಗಿ ಬದುಕಲು ಸಂಸ್ಥೆ ನೆರವು ಇದೆ ಎಂದು ಆತ್ಮಸ್ಥೈರ್ಯ ತುಂಬಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಶಿಬಿರದಲ್ಲಿ 36 ಮಂದಿ ಮದ್ಯವ್ಯಸನಿಗಳು ಭಾಗವಹಿಸಿ ಕುಡಿತ ಬಿಟ್ಟು ನವಜೀವನ ಸಾಗಿಸುವುದಾಗಿ ಪ್ರತಿಜ್ಞೆ ಮಾಡಿದರು. 

ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ರಾಜೇಶ್, ಉಪಾಧ್ಯಕ್ಷೆ ನಳಿನಿ, ಕಿಕ್ಕೇರಿ ಯೋಜನಾಧಿಕಾರಿ ಪ್ರಸಾದ್, ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಸೂರ್ಯನಾರಾಯಣ್, ಸುನೀತಾ, ಸದಸ್ಯರಾದ ಮೊಟ್ಟೆ ಮಂಜು, ನಾರಾಯಣಸ್ವಾಮಿ, ಶಿವರಾಂ, ಕುಮಾರ್, ರಂಗೇಗೌಡ, ವಿಮಲಾ, ಮಧುಸೂದನ್, ಶಿವರಾಮು, ಮಣಿ, ಮೇಲ್ವಿಚಾರಿಕೆ ಯಶೋಧಾ, ನವಜೀವನ ಸದಸ್ಯರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು. 

ಶಿಬಿರದಲ್ಲಿ 36 ಮಂದಿ ಮದ್ಯವ್ಯಸನಿಗಳಿಂದ ಪ್ರತಿಜ್ಞೆ ಮದ್ಯಪಾನದಿಂದ ಹೆಚ್ಚಿನ ಅಪಘಾತ, ದುರ್ಮರಣ  ನವಜೀವನಕ್ಕೆ ಕಾಲಿಟ್ಟ ಸದಸ್ಯರಿಗೆ ಸ್ವಾವಲಂಬನೆಗೆ ಸಂಸ್ಥೆ ನೆರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.