ADVERTISEMENT

ಕೊಟ್ಟಿಗೆ ಅನುದಾನದಲ್ಲಿ ತಾರತಮ್ಯ ಆರೋಪ: ಎಮ್ಮೆ ಕಟ್ಟಿ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 14:30 IST
Last Updated 18 ಜೂನ್ 2025, 14:30 IST
ಕೆ.ಆರ್.ಪೇಟೆ ತಾಲ್ಲೂಕಿನ ಆಲಂಬಾಡಿ ಕಾವಲು ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಎದುರು ಎಮ್ಮೆ ಕಟ್ಟಿ ಹಾಕಿ ಪ್ರತಿಭಟಿಸಿದರು
ಕೆ.ಆರ್.ಪೇಟೆ ತಾಲ್ಲೂಕಿನ ಆಲಂಬಾಡಿ ಕಾವಲು ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಎದುರು ಎಮ್ಮೆ ಕಟ್ಟಿ ಹಾಕಿ ಪ್ರತಿಭಟಿಸಿದರು   

ಕೆ.ಆರ್.ಪೇಟೆ: ಕೊಟ್ಟಿಗೆ ನಿರ್ಮಾಣಕ್ಕೆ ಅನುದಾನ ವಿತರಣೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಾರತಮ್ಯ ಮಾಡುತಿದ್ದಾರೆ ಎಂದು ಆರೋಪಿಸಿ ಆಲಂಬಾಡಿ ಕಾವಲು ಗ್ರಾಮ ಪಂಚಾಯಿತಿ ಎದುರು ಎಮ್ಮೆ ಕಟ್ಟಿ ಹಾಕಿ ಬುಧವಾರ ರೈತರು ಪ್ರತಿಭಟನೆ ನಡೆಸಿದರು.

ಅಧಿಕಾರಿಗಳು ಅನುದಾನವನ್ನು ಸಂಕಷ್ಟದಲ್ಲಿ ಇರುವವರಿಗೆ ನೀಡದೇ ಬಲ್ಲವರಿಗೆ ನೀಡುತಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಶಾಶ್ವತವಾಗಿ ಎಮ್ಮೆ ಕಟ್ಟಿ ಹಾಕಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮೂರ್ತಿ, ಪ್ರಭಾಕರ್, ಭೈರವ, ಮೋಹನ್, ಪಾಪಣ್ಣ ರಾಜೇಶ್, ಮಂಜು, ಪುನೀತ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.