ADVERTISEMENT

ಅರಳಕುಪ್ಪೆ: ಬನ್ನಮ್ಮ ದೇವಿ ಜಾತ್ರಾ ಮಹೋತ್ಸವ ಏ.18ರಿಂದ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 12:58 IST
Last Updated 16 ಏಪ್ರಿಲ್ 2025, 12:58 IST

ಪಾಂಡವಪುರ: ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ಗ್ರಾಮ ದೇವತೆ ಬನ್ನಮ್ಮ ದೇವಿ ಹಬ್ಬ–ಜಾತ್ರಾಮಹೋತ್ಸವ ಏ.18ರಿಂದ ಮೂರು ದಿನಗಳ ಕಾಲ ನಡೆಯಲಿದೆ.

18ರಂದು ರಾತ್ರಿ ಘಟೆ ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ ವೀರಮಕ್ಕಳ ಕುಣಿತ, ಪೂಜಾ ಕುಣಿತ, ಕೋಲಾಟ ವೀರಗಾಸೆ ಕುಣಿತದೊಂದಿಗೆ ಮಲ್ಲಿಗೆ ಹೂವಿನಿಂದ ಅಲಂಕೃತವಾದ ಘಟೆ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಇಡೀ ರಾತ್ರಿ ನಡೆಯಲಿದೆ.

19ರಂದು ಶ್ರೀ ಬನ್ನಮ್ಮ ದೇವಿಗೆ ‘ ಓಕುಳಿ ಉತ್ಸವ’ವು ನಡೆಯಲಿದ್ದು, ಯುವಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೀರಿನಿಂದ ಓಕುಳಿ ಆಟ ಆಡಲಿದ್ದಾರೆ. ಸಂಜೆ ರಸ ಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ADVERTISEMENT

20ರಂದು ಬೆಳಗಿನ ಜಾವ ‘ಶ್ರೀ ಬನ್ನದೇವಿ ಚಪ್ಪರ ರಥೋತ್ಸವ’ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು, ನಂದಿ ಧ್ವಜ ಕುಣಿತ, ಪೂಜಾ ಕುಣಿತ, ಕೋಲಾಟಗಳೊಂದಿಗೆ ಅಮ್ಮನವರ ಹೂವಿನ ಚಪ್ಪರ ಉತ್ಸವ ನಡೆಯಲಿದೆ. ಬಳಿಕ ಹೆಣ್ಣುಮಕ್ಕಳು ತಂಬಿಟ್ಟಿನ ಆರತಿ ಹೊತ್ತು ಏಳೂರಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವರು. ಜತೆಗೆ ಧೂಳಿ ಮರಿ ಸೇವೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.