
ಮದ್ದೂರು: ಶಿಕ್ಷಣ ಸೇರಿದಂತೆ ತ್ರಿವಿಧ ದಾಸೋಹದ ಮೂಲಕ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಬಾಲಗಂಗಾಧರನಾಥ ಸ್ವಾಮಿಜಿ ಅವರು ದಾರಿ ದೀಪವಾಗಿದ್ದರು ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.
ನಗರದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡರ ಬಳಗದ ವತಿಯಿಂದ ವತಿಯಿಂದ ನಡೆದ ಬಿ.ಜಿ.ಎಸ್.ಶಿಕ್ಷಣ ಶ್ರೀ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಸಿರು ಕ್ರಾಂತಿಯ ಹರಿಕಾರರೆಂದು ಹೆಸರು ಗಳಿಸಿದ್ದ ಶ್ರೀಗಳು, 5 ಕೋಟಿ ಗಿಡಗಳನ್ನು ನೆಡುವ ಮೂಲಕ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದರು ಎಂದರು.
ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ ಮಾತನಾಡಿ, ‘ಸ್ವಾಮೀಜಿ ಅವರ ಸ್ಮರಣೆ ಅಂಗವಾಗಿ ಚುಂಚಶ್ರೀ ಗೆಳೆಯರ ಬಳಗ ವತಿಯಿಂದ ಅವರ ಸ್ಮರಣೆ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸಿಕೊಂಡು ಬರಲಾಗುತ್ತಿದೆ’ ಎಂದರು.
ಬಿ.ಜಿ.ಎಸ್.ಶಿಕ್ಷಣ ಸೇವಾಶ್ರೀ ರತ್ನ ಪ್ರಶಸ್ತಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡರಿಗೆ ಡಾ.ಎಸ್.ಎಸ್.ಯೋಗಣ್ಣ ಪ್ರದಾನ ಮಾಡಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಟಿ.ರವಿಕುಮಾರ್, ನಿವೃತ್ತ ಮುಖ್ಯ ಎಂಜಿನಿಯರ್ ಎಸ್.ವಿ.ರಮೇಶ್, ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಅನಂತೇಗೌಡ, ಚುಂಚಶ್ರೀ ಗೆಳೆಯರ ಬಳಗ ಗೌರವಾಧ್ಯಕ್ಷ ಎಚ್.ಆರ್.ಅನಂತೇಗೌಡ, ಕಾರ್ಯದರ್ಶಿ ವಿ.ಟಿ.ರವಿಕುಮಾರ್, ಪ್ರಧಾನ ಸಂಚಾಲಕರಾದ ಎಸ್.ಚಂದ್ರು, ಎಂ.ಎ.ಕೃಷ್ಣ, ಉಪಾಧ್ಯಕ್ಷ ಸಿ.ಎಸ್.ಶಂಕರಯ್ಯ, ಮಹಾ ಪೋಷಕ ಸಿ.ಕೆ.ರಾಮಕೃಷ್ಣ, ಪ್ರಧಾನ ಸಂಘಟಕರಾದ ಕೆ.ಶಿವಕುಮಾರ್, ಡಿ.ಪಿ.ಶಿವಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.