ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ರಂಗನತಿಟ್ಟು ಪಕ್ಷಿಧಾಮಕ್ಕೆ ಪಶು ವೈದ್ಯಕೀಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಇಲಾಖೆ ಸಹಾಯಕ ನಿರ್ದೇಶಕ ಡಾ.ಜಿ.ಜೆ.ಸುರೇಶ್ ನೇತೃತ್ವದ ತಂಡ ಪಕ್ಷಿಗಳ ಚಲನ ವಲನ ಕುರಿತು ಪಕ್ಷಿಧಾಮದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜತೆ ಚರ್ಚೆ ನಡೆಸಿತು. ಹಕ್ಕಿಗಳ ಹಿಕ್ಕೆಯನ್ನು ಸಂಗ್ರಹಿಸಿತು.
‘ಪಕ್ಷಿಧಾಮದ ಪಕ್ಷಿಗಳಿಗೆ ಜ್ವರ ಹರಡುವ ಸಂಭವ ಕಡಿಮೆ. ಆತಂಕ ಪಡಬೇಕಿಲ್ಲ. ಸಂಗ್ರಹ ಮಾಡಿರುವ ಹಿಕ್ಕೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪಕ್ಷಿಗಳ ಸಾವು ಸಂಭವಿಸಿದಲ್ಲಿ ತಕ್ಷಣ ಮಾಹಿತಿ ನೀಡಲು ಸೂಚಿಸಲಾಗಿದೆ’ ಎಂದು ಡಾ.ಸುರೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.