
ಮದ್ದೂರು: ಟಿ.ಡಿ.ಎಸ್ ಕಟಾವಣೆ ಆಧರಿಸಿ ಬಿ.ಪಿ.ಎಲ್ ಕಾರ್ಡ್ ರದ್ದುಗೊಳಿಸುವ ಕ್ರಮ ಕೈಬಿಡುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯಬೇಕೆಂದು ಗ್ಯಾರಂಟಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರನ್ನು ಸಾಮಾಜಿಕ ಹೋರಾಟಗಾರ ನ.ಲಿ.ಕೃಷ್ಣ ಆಗ್ರಹಿಸಿದ್ದಾರೆ.
ಗೌರವಧನ ಆಧರಿತವಾಗಿ ಕೆಲಸ ಮಾಡುವ ನೌಕರರು ಹಾಗು ತರಬೇತಿ ಸಂಸ್ಥೆಯಲ್ಲಿ ನಿರ್ದಿಷ್ಟ ಮಾನವ ದಿನಗಳು ಇಲ್ಲದಿರುವ ತರಬೇತುದಾರರು ಮತ್ತಿತರಿಗೆ ಗೌರವ ಧನ ನೀಡುವ ಸಂದರ್ಭದಲ್ಲಿ ಟಿ.ಡಿ.ಎಸ್ ಕಟಾವಣೆ ಮಾಡುತ್ತಾ ಬರಲಾಗಿದೆ.
ಟಿ.ಡಿ.ಎಸ್ ಸಲ್ಲಿಸಿದ್ದನ್ನೇ ಮಾನದಂಡವಾಗಿಸಿ, ವಾರ್ಷಿಕ ವರಮಾನ ಮಿತಿ ದಾಟಿದೆ ಎಂದು ಬಿ.ಪಿ.ಎಲ್ ಕಾರ್ಡ್ ರದ್ದುಗೊಳಿಸುತ್ತಿರುವುದು ಆತಂಕಕಾರಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕರಿಗೆ ನೀಡುವ ಗೌರವಧನವನ್ನು ವರಮಾನ ಎಂದು ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.