ADVERTISEMENT

ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:59 IST
Last Updated 28 ಫೆಬ್ರುವರಿ 2021, 5:59 IST
ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಆರಾಧ್ಯದೈವ ಲಕ್ಷ್ಮೀನರಸಿಂಹಸ್ವಾಮಿಯವರ ಬ್ರಹ್ಮರಥೋತ್ಸವವು ಸಂಭ್ರಮದಿಂದ ನಡೆಯಿತು
ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಆರಾಧ್ಯದೈವ ಲಕ್ಷ್ಮೀನರಸಿಂಹಸ್ವಾಮಿಯವರ ಬ್ರಹ್ಮರಥೋತ್ಸವವು ಸಂಭ್ರಮದಿಂದ ನಡೆಯಿತು   

ಕೆ.ಆರ್.ಪೇಟೆ: ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ, ಗೌತಮ ಮುನಿಗಳ ತಪೋಭೂಮಿ ಅಕ್ಕಿಹೆಬ್ಬಾಳು ಗ್ರಾಮದ ಆರಾಧ್ಯದೈವ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಭಕ್ತಿ- ಸಡಗರದಿಂದ ಶನಿವಾರ ನಡೆಯಿತು.

ಪಾಂಡವಪುರ ಉಪವಿಭಾಗಾ ಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ಶಿವಮೂರ್ತಿ, ರಾಜಸ್ವನಿರೀಕ್ಷಕ ರಾಮಚಂದ್ರ, ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಕ್ಷಿತಾದಿನೇಶ್ ಮತ್ತು ತಾಲೂಕು ಪಂಚಾಯಿತಿ ಸದಸ್ಯೆ ವಿನುತಾಸುರೇಶ್ ಅವರು ರಥದಲ್ಲಿ ವಿರಾಜಮಾನವಾಗಿದ್ದ ಸ್ವಾಮಿಯ ಉತ್ಸವಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಹಾಗೂ ವಿಪ್ರರು ಜಯಘೋಷಗಳನ್ನು ಕೂಗಿ ರಥೋತ್ಸವದ ಸಂಭ್ರಮಕ್ಕೆ ಕಳೆ ತಂದರು.

ADVERTISEMENT

ರಥೋತ್ಸವದ ಅಂಗವಾಗಿ ನರಸಿಂಹಸ್ವಾಮಿ ಮತ್ತು ಕೊಂಕಣೇಶ್ವರ ಸ್ವಾಮಿಯ ಮೂಲ ವಿಗ್ರಹಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ರಥದ ಕಳಸಕ್ಕೆ ಹಣ್ಣು, ಜವನ ಎಸೆದು ಕೃತಾರ್ಥರಾದರು.

ಅರ್ಚಕರಾದ ಶ್ರೀಧರ್, ಸುಬ್ರಹ್ಮಣ್ಯ, ದೇವಸ್ಥಾನದ ಪಾರುಪತ್ತೇಗಾರರಾದ ಅಕ್ಕಿಹೆಬ್ಬಾಳು ರಮೇಶ್, ಎ. ಪ್ರಭಾಕರ್ ಪೂಜಾ ಕಾರ್ಯದ ನೇತೃತ್ವ ವಹಿಸಿದ್ದರು.

ಅಕ್ಕಿಹೆಬ್ಬಾಳು ಗ್ರಾಮದ ಮುಖಂಡರು, ಗ್ರಾಮದ ಯುವಕ ಸಂಘದ ಮುಖಂಡರು, ಗ್ರಾಮ ಪಂಚಾಯಿತಿಯ ಮಾಜಿ ಹಾಗೂ ಹಾಲಿ ಸದಸ್ಯರು, ಹೇಮಾವತಿ ಹೊನ್ನಾರು ಸಾಂಸ್ಕೃತಿಕ ವೇದಿಕೆ ಮತ್ತು ಲಕ್ಷ್ಮೀನರಸಿಂಹ ಸ್ವಾಮಿ ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿದರು.

ಭಕ್ತರಿಗೆ ಪ್ರಸಾದ ವಿತರಣೆ, ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.