
ಪ್ರಜಾವಾಣಿ ವಾರ್ತೆತಿ.ನರಸೀಪುರ: ಕೊಳ್ಳೇಗಾಲ ಮುಖ್ಯ ರಸ್ತೆಯ ಎಸ್‌ಎಂಆರ್ ಪೆಟ್ರೋಲ್ ಬಂಕ್ ಬಳಿ ಭಾನುವಾರ ಬೆಳಿಗ್ಗೆ ಕಾರು ಡಿಕ್ಕಿ ಹೊಡೆದು ಯುವತಿ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡರು.
ಪಟ್ಟಣ ಸಮೀಪದ ಆಲಗೂಡು ಗ್ರಾಮದ ರಾಜೇಶ್ ಎಂಬುವರ ಪುತ್ರಿ ಆರ್.ಜಯಂತಿ (18) ಮೃತಪಟ್ಟಿದ್ದು, ಅದೇ ಗ್ರಾಮದ ಕರಿಪುಟ್ಟಯ್ಯ ಅವರ ಮಗ ಜಯರಾಮು ಗಾಯಗೊಂಡಿದ್ದಾರೆ..
ಕೊಳ್ಳೇಗಾಲದಿಂದ ವೇಗವಾಗಿ ಬರುತ್ತಿದ್ದ ಕಾರು ಎಸ್‌ಎಂಆರ್ ಪೆಟ್ರೋಲ್ ಬಂಕ್ ಬಳಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಜಯಂತಿ ಹಾಗೂ ಜಯರಾಮು ಅವರಿಗೆ ಗುದ್ದಿದೆ. ಇದರಿಂದ ಅವರಿಬ್ಬರು ಕೆಳಗೆ ಬಿದ್ದಿದ್ದಾರೆ. ಜಯಂತಿ ಅವರಿಗೆ ತಲೆ ಹಾಗೂ ಮೈಕೈಗೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡ ಜಯರಾಮು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.