
ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಗ್ರಾಮದ ಬಳಿ, ಒಂದು ವಾರ ಕಾಲ ನಡೆದ ಉಪ್ಪರಿಕೆ ಬಸವೇಶ್ವರ ದನಗಳ ಜಾತ್ರೆ ಸೋಮವಾರ ಸಂಜೆ ಸಂಪನ್ನಗೊಂಡಿದ್ದು, ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.
ಜಾತ್ರೆಗೆ ಬಂದಿದ್ದ ರಾಸುಗಳ ಪೈಕಿ ತಾಲ್ಲೂಕಿನ ಕಡತನಾಳು ಗ್ರಾಮದ ರವಿ ಅವರ ಬಾಯಿಗೂಡಿದ ಹಳ್ಳಿಕಾರ್ ತಳಿಯ ಎತ್ತುಗಳು ಸರ್ವೋತ್ತಮ ಪ್ರಶಸ್ತಿ ಪಡೆದಿದ್ದು, ನಗದು ಬಹುಮಾನ ಮತ್ತು ಟ್ರೋಫಿ ವಿತರಿಸಲಾಯಿತು. ಕೆಆರ್‌ಎಸ್ ಮಣಿ ಅವರ ಎತ್ತುಗಳು ದ್ವಿತೀಯ ಮತ್ತು ಬೆಳಗೊಳ ನಂಜಪ್ಪ ಅವರ ಎತ್ತುಗಳು ಮೂರನೇ ಬಹುಮಾನ ಗಳಿಸಿದವು. ಹಾಲುಬಾಯಿ ವಿಭಾಗದಲ್ಲಿ ಮೈಸೂರು ತಾಲ್ಲೂಕು ಚಿಕ್ಕೇಗೌಡನಕೊಪ್ಪಲು ಮಹದೇವು ಅವರ ಎತ್ತುಗಳು ಪ್ರಥಮ, ಮಲ್ಲೇಗೌಡನಕೊಪ್ಪಲು ರಾಮಕೃಷ್ಣ ಅವರ ಎತ್ತುಗಳು ದ್ವಿತೀಯ, ಚಿಕ್ಕನಹಳ್ಳಿ ಈಶ್ವರೇಗೌಡ ಅವರ ಎತ್ತುಗಳು ತೃತೀಯ ಬಹುಮಾನ ಪಡೆದವು.
ಎರಡು ಹಲ್ಲು ವರ್ಗದಲ್ಲಿ ನೆಲಮನೆ ಮಂಜುನಾಥ್ ಅವರ ಎತ್ತುಗಳು ಪ್ರಥಮ, ಪ್ರಫುಲ್ಲ ಅವರ ಎತ್ತುಗಳು ದ್ವಿತೀಯ, ಚಿಕ್ಕನಹಳ್ಳಿ ರವಿ ಅವರ ಎತ್ತುಗಳು ತೃತೀಯ; ನಾಲ್ಕು ಹಲ್ಲು ವರ್ಗದಲ್ಲಿ ಆನಂದೂರು ಕಿಶೋರ್ ಅವರ ಎತ್ತುಗಳು ಪ್ರಥಮ, ಕಟ್ಟೇರಿ ಪಾಪೇಗೌಡ ಅವರ ಎತ್ತುಗಳು ದ್ವಿತೀಯ; ಆರು ಹಲ್ಲು ವಿಭಾಗದಲ್ಲಿ ಪಾಂಡವಪುರ ತಾಲ್ಲೂಕು ಕೆನ್ನಾಳು ಚನ್ನಪ್ಪ ಅವರ ಎತ್ತುಗಳು ಪ್ರಥಮ, ಬೆಳಗೊಳ ತಿಮ್ಮಣ್ಣ ಅವರ ಎತ್ತುಗಳಿಗೆ ದ್ವಿತೀಯ ಬಹುಮಾನ ನೀಡಲಾಯಿತು. ದೇಸಿ ತಳಿಯ ಉತ್ತಮ ಹಸುಗಳಿಗೂ ಬಹುಮಾನ ವಿತರಿಸಲಾಯಿತು.
ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಜಿ.ಟಿ. ದೇವೇಗೌಡ ಜಾತ್ರೆ ಸ್ಥಳಕ್ಕೆ ಭೇಟಿ ನೀಡಿ ಎತ್ತಗಳ ಮಾಲೀಕರಿಗೆ ಬಹುಮಾನ ವಿತರಿಸಿದರು. ಉಪ್ಪರಿಕೆ ಬಸವೇಶ್ವರ ದನಗಳ ಜಾತ್ರಾ ಸಮಿತಿ ಅಧ್ಯಕ್ಷ ವಿಷಕಂಠೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಕುಮಾರ್, ಖಜಾಂಚಿ ಎಂ.ಎನ್. ಮಲ್ಲೇಶ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸಂಜಯ್, ಮುಖಂಡರಾದ ಸಿಂಗೇಗೌಡ, ರವಿ, ರಾಘವೇಂದ್ರ, ಸತೀಶ್, ಗ್ರಾ.ಪಂ. ಸದಸ್ಯರಾದ ರವಿಶಂಕರ್, ದೇವರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.