ಬ್ಯಾಂಕ್ ಖಾತೆ
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಪಟ್ಟಣದ ರಂಗನಾಥನಗರದ ಶ್ರುತಿ ಎನ್. ಎಂಬವರ ಹೆಸರಿನಲ್ಲಿ ಬಿಹಾರದ ವ್ಯಕ್ತಿಯೊಬ್ಬ ದೆಹಲಿಯ ಬ್ಯಾಂಕೊಂದರಲ್ಲಿ ಖಾತೆ ತೆರೆದು ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಸಿರುವ ಪ್ರಕರಣದ ಬೆನ್ನತ್ತಿರುವ ಸಿಬಿಐ ಮತ್ತು ಇ.ಡಿ ಅಧಿಕಾರಿಗಳು ಮಂಗಳವಾರ ಸಂಜೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಂಗನಾಥನಗರದ ಭೈರವ ಅವರ ಪತ್ನಿ ಶೃತಿ ಅವರ ಮನೆಗೆ ಬೆಂಗಳೂರಿನಿಂದ ಬಂದ ಅಧಿಕಾರಿಗಳ ತಂಡ ಒಂದು ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿತು. ಅವರ ಬ್ಯಾಂಕ್ ಖಾತೆ, ಆಧಾರ್ ಚೀಟಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪಡೆದುಕೊಂಡರು.
ಬೆಂಗಳೂರು ವಲಯದ ಇ.ಡಿ ಅಧಿಕಾರಿ ಬಿನಯ್‌ಕುಮಾರ್, ಸಿಬಿಐ ಅಧಿಕಾರಿ ಎಂ. ಕುಮಾರಸ್ವಾಮಿ ತಂಡ ಭೈರವ ಅವರಿಂದ ಮಾಹಿತಿ ಪಡೆದಿದೆ. ಈ ಸಂದರ್ಭದಲ್ಲಿ ಶ್ರುತಿ ಅವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
‘ಅಗತ್ಯ ಬಿದ್ದರೆ ಇ.ಡಿ ಮತ್ತು ಸಿಬಿಐನ ಬೆಂಗಳೂರಿನಲ್ಲಿನ ಕಚೇರಿಗಳಿಗೆ ಅವರನ್ನು ಕರೆತರಬೇಕು ಎಂದು ಭೈರವ ಅವರಿಗೆ ತಿಳಿಸಿದ್ದು, ನೋಟಿಸ್ ಕೂಡ ನೀಡಿದ್ದಾರೆ’ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.