ADVERTISEMENT

ಶಾಸಕ ಟಿ.ಡಿ.ರಾಜೇಗೌಡಗೆ ಸೇರಿದ್ದು ಎನ್ನಲಾದ ₹ 35 ಲಕ್ಷದ 1,595 ಕುಕ್ಕರ್‌ ವಶ

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರಿಗೆ ಸೇರಿದ ಕುಕ್ಕರ್‌, ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 15:28 IST
Last Updated 27 ಮಾರ್ಚ್ 2023, 15:28 IST
ನಾಗಮಂಗಲ ತಾಲ್ಲೂಕು ಬಿಂಡಿಗನವಿಲೆ ಪೊಲೀಸರು ಕಂಟೇನರ್‌ ಪೂರ್ತಿ ಕುಕ್ಕರ್‌ಗಳನ್ನು ಜಪ್ತಿ ಮಾಡಿರುವುದು
ನಾಗಮಂಗಲ ತಾಲ್ಲೂಕು ಬಿಂಡಿಗನವಿಲೆ ಪೊಲೀಸರು ಕಂಟೇನರ್‌ ಪೂರ್ತಿ ಕುಕ್ಕರ್‌ಗಳನ್ನು ಜಪ್ತಿ ಮಾಡಿರುವುದು   

ನಾಗಮಂಗಲ (ಮಂಡ್ಯ ಜಿಲ್ಲೆ): ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಮತದಾರರಿಗೆ ಹಂಚಲು ಸಾಗಿಸುತ್ತಿದ್ದರು ಎನ್ನಲಾದ ₹ 35 ಲಕ್ಷ ಮೌಲ್ಯದ, 1,595 ಕುಕ್ಕರ್‌ಗಳನ್ನು ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ, ಕದಬಹಳ್ಳಿ ಟೋಲ್‌ ಬಳಿ ಬಿಂಡಿಗನವಿಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೆಕ್ ಪೋಸ್ಟ್ ಮೂಲಕ ಸಾಗುತ್ತಿದ್ದ ಕೆ.ಎ;51, ಎ.ಜಿ–4365 ಕಂಟೇನರ್‌ ತಪಾಸಣೆ ನಡೆಸಿದಾಗ ವಾಹನದ ತುಂಬೆಲ್ಲಾ ಕುಕ್ಕುರ್‌ಗಳು ಪತ್ತೆಯಾದವು. ತಕ್ಷಣವೇ ಲಾರಿ ಹಾಗೂ ಕುಕ್ಕರ್‌ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.

ಶಾಸಕ ಟಿ.ಡಿ.ರಾಜೇಗೌಡ ಅವರು ಬಾಳೆಹೊನ್ನೂರಿನ ಕೃಷ್ಣ ಹಾರ್ಡ್‌ವೇರ್‌ ಮತ್ತು ಎಲೆಕ್ಟ್ರಿಕ್‌ ಅಂಗಡಿಯಿಂದ ಕುಕ್ಕರ್‌ಗಳನ್ನು ಖರೀದಿ ಮಾಡಿದ್ದರು ಎಂಬುದು ವಿಚಾರಣೆ ನಂತರ ಗೊತ್ತಾಗಿದೆ. ಎಲೆಕ್ಟ್ರಿಕ್‌ ಅಂಗಡಿ ಮಾಲೀಕ ಹಾಗೂ ಶಾಸಕ ಟಿ.ಟಿ.ರಾಜೇಗೌಡರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.