ADVERTISEMENT

ಕಿಕ್ಕೇರಿ: ನ್ಯಾಯಾಲಯದ ಅಮೀನ್‌ಗೆ ಕಾರದಪುಡಿ ಎರಚಿದ್ದ ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:53 IST
Last Updated 15 ಸೆಪ್ಟೆಂಬರ್ 2025, 2:53 IST
   

ಕಿಕ್ಕೇರಿ: ಹೋಬಳಿಯ ಕಾಳೇನಹಳ್ಳಿ ಗ್ರಾಮಕ್ಕೆ ನ್ಯಾಯಾಲಯದ ಅಮೀನ್ ಆರೋಪಿಗೆ ಆರೆಸ್ಟ್ ವಾರೆಂಟು ನೀಡಲು ತೆರಳಿದ್ದ ವೇಳೆ ಆರೋಪಿತ ವ್ಯಕ್ತಿಯ ಪತ್ನಿ ಈಚೆಗೆ ಅಮೀನ್‌ಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದಳು. ಈಕೆಯನ್ನು ಕಿಕ್ಕೇರಿ ಪೊಲೀಸರು ಬಂಧಿಸಿ ಕೆ.ಆರ್. ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆರೋಪಿತ ವ್ಯಕ್ತಿ ಗ್ರಾಮದ ಚಿಕ್ಕ‌ಈರೇಗೌಡ ಹಾಗೂ ಅಮೀನ್ ಕಣ್ಣಿಗೆ ಖಾರದಪುಡಿ ಎರಚಿತ ಮಹಿಳೆ ಆರೋಪಿಯ ಪತ್ನಿ ಸಾಕಮ್ಮ ಆಗಿದ್ದಾರೆ.

ಚಿಕ್ಕಮಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಅಪಘಾತ ಪ್ರಕರಣ ಚಿಕ್ಕ‌ಈರೇಗೌಡರ ವಿರುದ್ಧ ದಾಖಲಾಗಿತ್ತು. ಇತ್ತೀಚೆಗೆ ಕೆ.ಆರ್. ಪೇಟೆ ಸಿವಿಲ್ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು. ಪ್ರಕರಣ ಇತ್ಯಾರ್ಥವಾಗಿ ಚಿಕ್ಕ‌ಈರೇಗೌಡನಿಗೆ ಆರೆಸ್ಟ್ ವಾರೆಂಟ್ ಜಾರಿಯಾಗಿತ್ತು.

ADVERTISEMENT

ನ್ಯಾಯಾಲಯದ ಆದೇಶದಂತೆ ಬಂಧನ ವಾರೆಂಟ್ ನೀಡಲು ಅಮೀನ್ ಸೆ.6ರಂದು ಕಾಳೇನಹಳ್ಳಿ ಗ್ರಾಮಕ್ಕೆ ತೆರಳಿದ್ದ ವೇಳೆ ಆರೋಪಿ ವ್ಯಕ್ತಿಯ ಪತ್ನಿ ಸಾಕಮ್ಮ ಅಮೀನ್ ಕಣ್ಣಿಗೆ ಖಾರದಪುಡಿ ಎರಚಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದಳು.

ಅಮೀನ್ ಕಿಕ್ಕೇರಿ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ ಸಾಕಮ್ಮಳನ್ನು ಕೆ.ಆರ್. ಪೇಟೆ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ತಾ. ಸಿವಿಲ್ ನ್ಯಾಯಾಧೀಶ ಸುಧೀರ್ ಆರೋಪಿಗೆ ೧೪ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.