ಮದ್ದೂರು : ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯಿಂದ ರೈತರು ಆರ್ಥಿಕತೆಯಲ್ಲಿ ಪ್ರಗತಿ, ನೆಮ್ಮದಿ ಕಾಣುತ್ತಿ ದ್ದಾರೆ ಎಂದು ಶಾಸಕ ಕೆ. ಎಂ. ಉದಯ್ ತಿಳಿಸಿದರು.
ತಾಲ್ಲೂಕಿನ ಆಲಂ ಶೆಟ್ಟಿಹಳ್ಳಿಯಲ್ಲಿ ಶುಕ್ರವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಆಲಂಶೆಟ್ಟಿಯಲ್ಲಿ ಮಹಿಳೆಯರೇ ಸಂಘ ನಡೆತ್ತಿದ್ದು, ಮಹಿಳೆಯರು ಹಣವನ್ನು ಸರಿಯಾದ ಕ್ರಮದಲ್ಲಿ ಬಳಸುವುದೇ ಅಭಿವೃದ್ಧಿಗೆ ಕಾರಣ ಎಂದರು.
ಸಹಕಾರ ಸಂಘದ ಅಧ್ಯಕ್ಷೆ ಪುಟ್ಟತಾಯಮ್ಮ, ಉಪಾಧ್ಯಕ್ಷೆ ಸತ್ಯಾವತಿ ಅಪ್ಪಾಜಿ, ನಿರ್ದೇಶಕರಾದ ಸೌಭಾಗ್ಯ, ಪವಿತ್ರ, ಸಣ್ಣಮ್ಮ,ಸುನಂದಮ್ಮ, ಕಲಾವತಿ, ಮಂಗಳಮ್ಮ, ಜಯಲಕ್ಶ್ಮಮ್ಮ,ಮುಖಂಡರಾದ ನಟರಾಜು, ನಾಗೇಗೌಡ, ಮಹಾದೇವಯ್ಯ,ಅಶೋಕ್, ಕುಮಾರಸ್ವಾಮಿ, ಶಮಿತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.