ADVERTISEMENT

ಮದ್ದೂರು | ಅನ್ಯಾಯದ ವಿರುದ್ಧ ಬರೆಯುವುದೇ ಬಂಡಾಯ ಸಾಹಿತ್ಯ: ಹುರುಗಲವಾಡಿ ರಾಮಯ್ಯ

ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:31 IST
Last Updated 2 ಸೆಪ್ಟೆಂಬರ್ 2025, 2:31 IST
<div class="paragraphs"><p>ಮದ್ದೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭ</p></div>

ಮದ್ದೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭ

   

ಮದ್ದೂರು: ಅನ್ಯಾಯದ ವಿರುದ್ಧ ಮಾತನಾಡುವುದು ಮತ್ತು ಬರೆಯುವುದೇ ಬಂಡಾಯ ಸಾಹಿತ್ಯ ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಸಾಮಾಜಿಕ ಚಳವಳಿ ನೇತಾರ ನಾರಾಯಣ ಗುರು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯೇ ಬಂಡಾಯ ಸಾಹಿತ್ಯವನ್ನು ಹುಟ್ಟುಹಾಕಿದೆ. ದಲಿತ ಚಳವಳಿಯೇ ನಿಜವಾದ ಜಾತ್ಯತೀತ ಚಳವಳಿಯಾಗಿದೆ’ ಎಂದರು.

‘ದಲಿತ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಇನ್ಯಾವುದೇ ಸಂಘಟನೆಗೆ ಪರ್ಯಾಯ ಸಂಘಟನೆ ಅಲ್ಲ. ದಲಿತರ ಪರವಾಗಿ ಚಿಂತನೆವುಳ್ಳವರು ಈ ಪರಿಷತ್ತಿನ ಒಡನಾಡಿ ಗಳು, ಬಂಧುಗಳಾಗಿದ್ದಾರೆ’ ಎಂದು ಹೇಳಿದರು.

ಸಾಹಿತಿ ಬಿ.ಎಲ್. ಮಧುಸೂದನ್, ಪ್ರಾಧ್ಯಾಪಕ ಡಾ.ಹೊಂಬಯ್ಯ ಹೊನ್ನಲಗೆರೆ, ಶಿಕ್ಷಕಿ ಹಾಗೂ ಕವಿಯತ್ರಿ ಸರೋಜಮ್ಮ ಲಿಂಗರಾಜು ಅವರಿಗೆ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೊಪ್ಪ ಹಾಗೂ ದಸಾಪ ತಾಲ್ಲೂಕು ಗೌರವ ಅಧ್ಯಕ್ಷ ಹನುಮಂತ ರಾಯಪ್ಪ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದರು.

ರಾಣಿ ಐಶ್ವರ್ಯ ಡೆವೆಲೊಪರ್ಸ್ ಮಾಲೀಕ ಸತೀಶ್, ನಿವೃತ್ತ ಶಿಕ್ಷಕ ಗುರುಮೂರ್ತಿ,ದಸಾಪ ತಾಲ್ಲೂಕು ಅಧ್ಯಕ್ಷ ಕೆ.ಟಿ. ಶಿವಕುಮಾರ್, ಗೌರವಧ್ಯಕ್ಷೆ ಸುಶೀಲಮ್ಮ, ಬಿಇಒ ಧನಂಜಯ, ಡಿ.ಸಿ.ಮಹೇಂದ್ರ, ಶಶಿಕುಮಾರ, ನಾರಾಯಣ್ ಹಾಜರಿದ್ದರು.

ದಲಿತ ಕೇವಲ ಜಾತಿ ಸೂಚಕ ಪದವಲ್ಲ. ತುಳಿತಕ್ಕೊಳಕಾದ ದೌರ್ಜನ್ಯಕ್ಕೊಳಕಾದ ನೊಂದವರೆಲ್ಲರೂ ದಲಿತರಾಗಿದ್ದು ದೌರ್ಜನ್ಯದ ವಿರುದ್ಧ ದನಿಯೆತ್ತುವುದೇ ದಲಿತ ಸಾಹಿತ್ಯದ ತಿರುಳಾಗಿದೆ
ಹುರುಗಲವಾಡಿ ರಾಮಯ್ಯ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.