ADVERTISEMENT

ಮಳವಳ್ಳಿ: ನಟ ರಾಜಕುಮಾರ್ ಅವರಿಗೆ ಭಾರತ್ನ ರತ್ನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 13:01 IST
Last Updated 26 ಏಪ್ರಿಲ್ 2025, 13:01 IST
ಮಳವಳ್ಳಿಯ ಡಾ.ರಾಜಕುಮಾರ್ ಕಲಾ ಸಂಘದ ಕಚೇರಿಯಲ್ಲಿ ರಾಜಕುಮಾರ್ ಅವರ ಜನ್ಮದಿನಾಚರಣೆ ಅವರ ಜನ್ಮದಿನವನ್ನು ಆಚರಿಸಲಾಯಿತು
ಮಳವಳ್ಳಿಯ ಡಾ.ರಾಜಕುಮಾರ್ ಕಲಾ ಸಂಘದ ಕಚೇರಿಯಲ್ಲಿ ರಾಜಕುಮಾರ್ ಅವರ ಜನ್ಮದಿನಾಚರಣೆ ಅವರ ಜನ್ಮದಿನವನ್ನು ಆಚರಿಸಲಾಯಿತು   

ಮಳವಳ್ಳಿ: ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಮಹತ್ತರ ಕೊಡುಗೆ ನೀಡಿರುವ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಡಾ.ರಾಜ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಡಾ.ರಾಜಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಒತ್ತಾಯಿಸಿದರು.

ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಡಾ. ರಾಜಕುಮಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,
‘ಮೇರು ವ್ಯಕ್ತಿತ್ವದ ರಾಜಕುಮಾರ್ ಅವರು ನಟನೆಯ ಮೂಲಕ ನಾಡಿನ ಆದರ್ಶವಾಗಿದ್ದರು. ಅವರು ಚಲನಚಿತ್ರಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ. ಎಲ್ಲ ರೀತಿಯ ಕಥೆಗಳಿಗೂ ಜೀವ ತುಂಬಿದಂತ ಅವರು ಕನ್ನಡಿಗರ ಶಕ್ತಿಯಾಗಿದ್ದರು. ಬಡವರ ಪರ, ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಅವರಲ್ಲಿರುವ ಕಾಳಜಿ ಶ್ಲಾಘನೀಯವಾಗಿದೆ’ ಎಂದು ಹೇಳಿದರು.

ಹಲವು ಚಲನಚಿತ್ರಗಳನ್ನು ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸುವ ಮೂಲಕ ಭವಿಷ್ಯದ ಮಕ್ಕಳಲ್ಲಿ ನಾಡು ನುಡಿಯ ಕಾಳಜಿಯನ್ನು ಬೆಳೆಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕು. ಅಲ್ಲದೇ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ‘ಭಾರತ್ನ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ಪುರಸಭೆ ಸದಸ್ಯ ಎಂ.ಎನ್. ಶಿವಸ್ವಾಮಿ, ರಾ.ಶಿ.ರಾ.ಪು ಸಂಘದ ಅಧ್ಯಕ್ಷ ಕೃಷ್ಣ, ಮಹೇಶ್, ಸೋಮಶೇಖರ್, ಜಗದೀಶ್(ಜಗ್ಗು), ಸುನೀ, ನಾಗರಾಜು, ಶಿವಕುಮಾರ್, ಮಹದೇವು, ಜಗದೀಶ್ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.