ADVERTISEMENT

ಕೆ.ಆರ್. ಪೇಟೆ: ಡಾ.ರಾಜ್ ರಂಗ ಕಲಾ ವೇದಿಕೆ ಅಧ್ಯಕ್ಷರಾಗಿ ದೇವರಾಜು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:23 IST
Last Updated 20 ಅಕ್ಟೋಬರ್ 2025, 6:23 IST
ಕೆ.ಆರ್.ಪೇಟೆಯಲ್ಲಿ ಅಸ್ತಿತ್ವಕ್ಕೆ ಬಂದ ಡಾ.ರಾಜ್ ರಂಗ ಕಲಾ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಕಾರಿಗಳನ್ನು ಕಲಾವಿದರು ಅಭಿನಂದಿಸಿದರು
ಕೆ.ಆರ್.ಪೇಟೆಯಲ್ಲಿ ಅಸ್ತಿತ್ವಕ್ಕೆ ಬಂದ ಡಾ.ರಾಜ್ ರಂಗ ಕಲಾ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಕಾರಿಗಳನ್ನು ಕಲಾವಿದರು ಅಭಿನಂದಿಸಿದರು   

ಕೆ.ಆರ್. ಪೇಟೆ: ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಡಾ.ರಾಜ್ ರಂಗ ಕಲಾ ವೇದಿಕೆ ಅಧ್ಯಕ್ಷರಾಗಿ ಹರಿಕಥೆ ವಿದ್ವಾಂಸ ರಾಗಿಮುದ್ದನಹಳ್ಳಿ ದೇವರಾಜು ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಡ್ರಾಮಾ ಮಾಸ್ಟರ್ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷರಾಗಿ ಸಣ್ಣತಮ್ಮೇಗೌಡ, ಕಾರ್ಯದರ್ಶಿಯಾಗಿ ಕೂಡಲಕುಪ್ಪೆ ದೇವರಾಜು, ಖಜಾಂಚಿ ಮರಟಿಕೊಪ್ಪಲು ಮಂಜುನಾಥ್, ಸಹ ಕಾರ್ಯದರ್ಶಿ ಅಗ್ರಹಾರಬಾಚಹಳ್ಳಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿಯಾಗಿ ಹೊಸಹೊಳಲು ರಘು ಆಯ್ಕೆಯಾದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸಭೆ ಸೇರಿದ್ದ ಕಲಾವಿದರು ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಕಲಾವಿದರು ಮತ್ತು ಅಭಿಮಾನಿಗಳು ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.

ADVERTISEMENT

ರಾಗಿಮುದ್ದನಹಳ್ಳಿ ದೇವರಾಜು ಮಾತನಾಡಿ, ‘ಹಿಂದಿನ ಕಾಲದಿಂದಲೂ ನಮ್ಮ ಪೂರ್ವಜರು ಕಲೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದಾರೆ. ಅದನ್ನು ‌ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕಲೆಯನ್ನು ಪೋಷಿಸಿ ಮುನ್ನಡೆಬೇಕು. ಹಾಗಾಗಿ ಹೊಸದಾಗಿ ಕಲಾವಿದರ ವೇದಿಕೆಯನ್ನು ರಚಿಸಲಾಗಿದೆ. ಕಲಾವಿದರ ಸಂಕಷ್ಟಗಳ ಪರಿಹಾರಕ್ಕಾಗಿ ಶ್ರಮಿಸುವುದು, ಪ್ರತಿ ವರ್ಷ ನಾಟಕೋತ್ಸವ ನಡೆಸಲಾಗುವುದು ಎಂದರು.

ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್ ಮಾತನಾಡಿ, ‘ನ.8ರಿಂದ ಪಟ್ಟಣದ ಶ್ರೀರಂಗ ಚಿತ್ರಮಂದಿರದ ಬಳಿ 20 ದಿನಗಳ ಕಾಲ ಜಿಲ್ಲಾ ಮಟ್ಟದ ಪೌರಾಣಿಕ ಮತ್ತು ಸಾಮಾಜಿಕ ನಾಟಕೋತ್ಸವವನ್ನು ನಡೆಸಲಾಗುವುದು’ ಎಂದರು.

ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಕೆ.ಎನ್. ತಮ್ಮಯ್ಯ, ವಿಠಲಪುರ ಸಣ್ಣತಮ್ಮೆಗೌಡ, ಕೂಡಲಕುಪ್ಪೆ ದೇವರಾಜು, ಮರಟಿಕೊಪ್ಪಲು ಮಂಜುನಾಥ್ ಹೊಸಹೊಳಲು ರಘು, ರಾಮಚಂದ್ರು, ಪುಟ್ಟರಾಜು, ಕಾಡುಮೆಣಸ ಚಂದ್ರು, ಹೊಸಹೊಳಲು ದೇವರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.