ADVERTISEMENT

ಹೊನಗಹಳ್ಳಿ ಡೇರಿಗೆ ನಿರ್ದೇಶಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2025, 13:47 IST
Last Updated 4 ಮೇ 2025, 13:47 IST
ಬೆಳಕವಾಡಿ ಸಮೀಪದ ಹೊನಗಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರು
ಬೆಳಕವಾಡಿ ಸಮೀಪದ ಹೊನಗಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರು   

ಬೆಳಕವಾಡಿ: ಸಮೀಪದ ಹೊನಗಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 10 ಮಂದಿ ಚುನಾಯಿತರಾದರು.

ಪರಿಶಿಷ್ಟ ಪಂಗಡ ಸ್ಥಾನ ಹೊರತು ಪಡಿಸಿ ಉಳಿದ 10 ಸ್ಥಾನಗಳಿಗೆ 17 ಮಂದಿ ನಾಮಪತ್ರ ಸಲ್ಲಿಸಿದ್ದರು.

ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಪುಟ್ಟಗೌರಮ್ಮ, ಸಿದ್ದರಾಜಮ್ಮ, ರತ್ನಮ್ಮ, ಶುಭ, ಮರಿನಂಜಮ್ಮ, ಮೈನಾ, ರಾಜಮ್ಮ, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಮೀನಾಕ್ಷಿ, ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಲಕ್ಷ್ಮಮ್ಮ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮಣಿ ಚುನಾಯಿತರಾದರು ಎಂದು ಚುನಾವಣಾಧಿಕಾರಿ ಜಿ.ಎಂ.ರಾಮಕೃಷ್ಣ ಘೋಷಿಸಿದರು.

ADVERTISEMENT

ಕಾರ್ಯದರ್ಶಿ ಎಂ. ರೇಣುಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.