ಮಂಡ್ಯ: ‘ಗೋವುಗಳನ್ನು ಕಸಾಯಿ ಖಾನೆಗಳಿಗೆ ಸಾಗಿಸುತ್ತಿರುವುದರಿಂದ ಗೋವಿನ ಸಂತತಿ ಕಡಿಮೆ ಆಗುತ್ತಿರುವುದರಿಂದ ಭೂಮಿಯ ಫಲವತ್ತತೆ ಕಡಿಮೆ ಆಗಿದೆ’ ಎಂದು ಭಾರತೀಯ ಕಿಸಾನ್ ಸಂಘದ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಆತಂಕ ಪಟ್ಟರು.
ನಗರದ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಸಂಘದ ವತಿಯಿಂದ ಸೋಮವಾರ ನಡೆದ ನಂದಗೋಕುಲ ಗೋಶಾಲೆ, ಮೇಲುಕೋಟೆಯಲ್ಲಿರುವ ಗೋವುಗಳಿಗೆ ಮೇವು ವಿತರಿಸಿ ಅವರು ಮಾತನಾಡಿದರು.
‘ತಾಯಿಯ ಹಾಲನ್ನು ನಾವು ಕೇವಲ 9 ತಿಂಗಳಿಂದ ಒಂದು ವರ್ಷದವರೆಗೆ ಕುಡಿಯುತ್ತೇವೆ. ಆದರೆ, ಗೋಮಾತೆ ಹಾಲನ್ನು ಜೀವನ ಪರ್ಯಂತ ಕುಡಿಯುತ್ತೇವೆ. ಇದರಿಂದಲೇ ಅದಕ್ಕೆ ಗೋಮಾತೆ ಎಂದು ಪೂರ್ವಜರು ಕರೆದರು. ಅಲ್ಲಿಂದ ನಾವು ಗೋವನ್ನು ಪೂಜಿಸಿಕೊಂಡು ಬರುತ್ತಿದ್ದೇವೆ. ಇಂದು ಗೋವುಗಳ ಸಂತತಿ ಕಡಿಮೆ ಆಗುತ್ತಿರುವುದನ್ನು ತಪ್ಪಿಸುವುದು ಮುಖ್ಯವಾಗಬೇಕು’ ಎಂದು ಮನವಿ ಮಾಡಿದರು.
‘ಪೂಜನೀಯ ಸ್ಥಾನದಲ್ಲಿರುವ ಗೋಮಾತೆಯನ್ನು ನಾವು ಕಸಾಯಿ ಖಾನೆಗಳಿಗೆ ಅಟ್ಟುತ್ತಿದ್ದೇವೆ. ಅದರಲ್ಲಿ ನಿತ್ಯವೂ ಗೋಮಾತೆಯ ರಕ್ತ ಹರಿಯುತ್ತಿದೆ’ ಎಂದು ಆರೋಪಿಸಿದರು.
ಮುಖಂಡರಾದ ಎಚ್.ಆರ್.ಅರವಿಂದ್, ವಿವೇಕ್, ಮಾದೇಗೌಡ, ಗಂಗಾನಾಥ್ ಪ್ರಭು, ರಾ.ಸಿ. ಸಿದ್ದರಾಜುಗೌಡ, ನಿತ್ಯಾನಂದ, ಶಿವಕುಮಾರ್, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಎನ್.ಗೌಡ ಭಾಗವಹಿಸಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಕೇವಲ 300 ಕಸಾಯಿಖಾನೆಗಳಿದ್ದವು. ಆದರೆ ಇಂದು 3 ಲಕ್ಷ ಕಸಾಯಿ ಖಾನೆಗಳಿವೆನಾರಾಯಣಸ್ವಾಮಿ, ಭಾರತೀಯ ಕಿಸಾನ್ ಸಂಘದ ಪ್ರಾಂತ ಸಂಘಟನಾ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.