ADVERTISEMENT

ಮೈಷುಗರ್‌ ಪ್ರೌಢಶಾಲೆ ಗುತ್ತಿಗೆ ನೀಡಬೇಡಿ: ಕೆ. ಬೋರಯ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 15:26 IST
Last Updated 14 ಜೂನ್ 2025, 15:26 IST
ಕೆ.ಬೋರಯ್ಯ
ಕೆ.ಬೋರಯ್ಯ   

ಮಂಡ್ಯ: ನಗರದಲ್ಲಿ ತನ್ನದೇ ಇತಿಹಾಸ ಹೊಂದಿರುವ ಮೈಷುಗರ್ ಪ್ರೌಢಶಾಲೆಯನ್ನು ಉಚಿತವಾಗಿ ಗುತ್ತಿಗೆ ನೀಡುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಮೈಷುಗರ್ ಹೈಸ್ಕೂಲ್ ವೆಲ್‌ಫೇರ್ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಸದಸ್ಯ ಕೆ. ಬೋರಯ್ಯ ಒತ್ತಾಯಿಸಿದರು.

ಈ ಹಿಂದೆ ನಮ್ಮ ಮೈಷುಗರ್ ಕಂಪನಿ ಮತ್ತು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಮೊದಲಿನಂತೆಯೇ ಶಾಲಾ ನಿರ್ವಹಣೆ ಮಾಡಬೇಕು. ಖಾಸಗಿಯವರಿಗೆ ಗುತ್ತಿಗೆ ನೀಡುವುದು ಬೇಡ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಸಲಹೆ ನೀಡಿದರು.

ಕಂಪನಿಗೆ ಕಬ್ಬು ಸರಬರಾಜು ಮಾಡುವ ರೈತರ ಬಿಲ್‌ನಲ್ಲಿ ಪ್ರತಿ ಟನ್‌ಗೆ ₹4, ಕಂಪನಿಯಿಂದ ₹4 ಸೇರಿ ₹8ರಂತೆ ವಂತಿಕೆ ಹಣದಲ್ಲಿ ಟ್ರಸ್ಟ್ ರಚನೆ ಮಾಡಿ ಶಾಲೆ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಕಾರ್ಖಾನೆ ಕಳೆದ 10 ವರ್ಷಗಳಿಂದ ಸರಿಯಾಗಿ ಕಬ್ಬು ನುರಿಸದೇ ಇರುವುದರಿಂದ ತೊಂದರೆಯಾಗಿದೆ ಎಂದು ಆರೋಪಿಸಿದರು.

ADVERTISEMENT

ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಟಿ.ಜಯರಾಂ, ಕಾರ್ಯದರ್ಶಿ ಕೆ.ಎಂ.ಶಿವಕುಮಾರ್, ಉಪಾಧ್ಯಕ್ಷ ಎಸ್.ಸಿ.ಸತ್ಯನಾರಾಯಣ್‌ದೇವ್, ಸದಸ್ಯರಾದ ಇಂಡುವಾಳು ಚಂದ್ರಶೇಖರ್, ಸಂತೋಷ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.