ADVERTISEMENT

ಮದ್ಯದಂಗಡಿ ವಿರೋಧಿಸಿ ದುದ್ದ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:28 IST
Last Updated 19 ಡಿಸೆಂಬರ್ 2025, 7:28 IST
ಅಕ್ರಮವಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ ತೆರೆಯಲು ಅವಕಾಶ ನೀಡುರುವುದನ್ನು ಖಂಡಿಸಿ ಮಂಡ್ಯ ತಾಲ್ಲೂಕಿನ ದುದ್ದ ಗ್ರಾಮಸ್ಥರು ನಗರದ ಅಬಕಾರಿ ಉಪ ಅಧೀಕ್ಷಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು
ಅಕ್ರಮವಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ ತೆರೆಯಲು ಅವಕಾಶ ನೀಡುರುವುದನ್ನು ಖಂಡಿಸಿ ಮಂಡ್ಯ ತಾಲ್ಲೂಕಿನ ದುದ್ದ ಗ್ರಾಮಸ್ಥರು ನಗರದ ಅಬಕಾರಿ ಉಪ ಅಧೀಕ್ಷಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು   

ಮಂಡ್ಯ: ಗ್ರಾಮದಲ್ಲಿ ಅಕ್ರಮವಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ ತೆರೆಯಲು ಅವಕಾಶ ನೀಡುರುವುದನ್ನು ಖಂಡಿಸಿ ತಾಲ್ಲೂಕಿನ ದುದ್ದ ಗ್ರಾಮಸ್ಥರು ನಗರದ ಅಬಕಾರಿ ಉಪ ಅಧೀಕ್ಷಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಬಾರ್‌ ಮತ್ತು ರೆಸ್ಟೋರೆಂಟ್‌ ಅನ್ನು ತೆರೆಯಲು ಅವಕಾಶ ನೀಡಿರುವ ಪಿಡಿಒ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಘೋಷಣೆ ಕೂಗಿದರು.

ಶಾಲಾ-ಕಾಲೇಜು ಸಮೀಪವೇ ತೆರೆದಿರುವ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಮುಚ್ಚಿಸಬೇಕು. ‘ಬೋರ್ಡಿಂಗ್‌ ಲಾಡ್ಜಿಂಗ್‌ ತೆರೆಯಲು ಅನುಮತಿ ನೀಡಲಾಗಿದೆ. ಗ್ರಾ.ಪಂ. ಸಭೆಯಲ್ಲಿ ಮಾಹಿತಿ ನೀಡದೆ, ಬಾರ್ ನಡೆಸಲು ಲೈಸೆನ್ಸ್ ನೀಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಪಂಚಾಯಿತಿ ಅನುಮತಿ ಇಲ್ಲದೆ ಯಾವುದೇ ವಾಣಿಜ್ಯ ಮಳಿಗೆ ಆಗಲಿ ಅಥವಾ ಅಂಗಡಿಗಳಿಗೆ ಲೈಸೆನ್ಸ್ ಪತ್ರವಿಲ್ಲದೆ ತೆರೆಯಲು ಸಾಧ್ಯವಿಲ್ಲ. ಅದರಲ್ಲೂ ಶಾಲೆ, ಕಾಲೇಜು, ಕುಟುಂಬಗಳು ವಾಸಿಸುವ ಸ್ಥಳದ ಸಮೀಪವೇ ಅವಕಾಶ ಏಕೆ ನೀಡಿದರು ಎಂದು ಪ್ರಶ್ನಿಸಿದರು.

ಗ್ರಾಮದ ಮುಖಂಡರಾದ ಶ್ರೇಯಸ್‌ ವೈ.ಗೌಡ, ಬಸಮಣಿ, ಲಕ್ಷ್ಮಮ್ಮ, ಪದ್ಮಾ, ಶ್ವೇತಾ, ರಾಮಚಂದ್ರ, ಪ್ರಸನ್ನ, ನಾಗರಾಜು, ಅನಿಲ್‌, ರಾಜಣ್ಣ, ನರಸಿಂಹೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.