ಸಂತೇಬಾಚಹಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಮುಸಲ್ಮಾನರು ಈದ್ ಉಲ್ ಫಿತ್ರ್ ಆಚರಿಸಿದರು.
ತನ್ವರ್ ಪಾಷ ಮಾತನಾಡಿ, ‘ಹಬ್ಬದ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದು, ಈದ್ಗಾ ಮೈದಾನದವರೆಗೆ ಕಾಲ್ನಡಿಗೆಯಲ್ಲಿ ಗುರುಗಳೊಂದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಹಿಂದೂ ಮುಖಂಡರು ಹಾಗೂ ಕಾರ್ಮಿಕರಿಗೆ ಫಲಾಹಾರ ನೀಡಿ ಎಲ್ಲರೂ ಒಂದೇ ಎಂಬ ಸಂದೇಶ ನೀಡಿದ್ದೇವೆ ಎಂದರು.
ಸಂತೇಬಾಚಹಳ್ಳಿ ಪೊಲೀಸ್ ಹೊರಠಾಣೆ ಸಿಬ್ಬಂದಿ ಗೌಸ್ ಖಾನ್ ಹಾಗೂ ಮನುಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಸೈಯದ್ ಗಫುರ್, ಮಹಮದ್ ಅರ್ಫಾತ್, ಸಯ್ಯದ್ ಪಯಾಜ್, ಹತೀಕ್, ಸಾದಿಕ್ ಪಾಷ, ಕಲೀಮ್ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.